ಎಂಡಿಎಂಎ ಸಾಗಾಟ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನವದೆಹಲಿಯಿಂದ 5.20 ಕೋ.ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿಗೆ ತರುತ್ತಿದ್ದ ವೇಳೆ ಬಂಧನಕ್ಕೊಳಗಾಗಿರುವ ಆರೋಪಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಡಿ ತಾಲೂಕಿನ ಬಂಗಾಡಿ, ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ಫಾಜ್ (28) ಮತ್ತು ಲಾಯಿಲಾ ಗ್ರಾಮ ಹಳೆ ಪೇಟೆ ಉಜಿರೆ ವಿವೇಕಾನಂದ ನಗರದ ಮೊಹಮ್ಮದ್ ಮುಸ್ತಾಫ (28) ಬಂಧಿತ ಆರೋಪಿಗಳು.
್ಞನವದೆಹಲಿಯಿಂದ ಕಾರಿನಲ್ಲಿ ಎಂಡಿಎಂಎ ತರುತ್ತಿದ್ದ ವೇಳೆ ಬಾಗಲಕೋಟೆಯ ಹುನಗುಂದ ಎಂಬಲ್ಲಿ ಆರೋಪಿಗಳ ಕಾರು ಹಾಳಾಗಿದ್ದು, ಆ ಹಿನ್ನೆಲೆಯಲ್ಲಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಮೊದಲೇ ಆರೋಪಿಗಳ ಬೆನ್ನುಹತ್ತಿದ್ದ ಸಿಸಿಬಿ ಪೊಲೀಸರು ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಲಾಡ್ಜ್ ಗೆ ದಾಳಿ ನಡೆಸಿ ಆರೋಪಿಗಳನ್ನು ಜು.15ರಂದು ಬಂಧಿಸಿದ್ದರು.
ಆರೋಪಿಗಳು ಕಾರು ಮೂಲಕ ಬೆಂಗಳೂರಿಗೆ ಎಂಡಿಎಂಎ ಸಾಗಾಟ ಮಾಡುತ್ತಿದ್ದರು. ಹಲವು ಬಾರಿ ಇದೇ ರೀತಿ ಸಾಗಾಟ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಇವರ ಜತೆ ಇನ್ನೂ ಹಲವರಿದ್ದು, ಪೊಲೀಸ್ ಕೈಗೆ ಇಬ್ಬರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಉಳಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net