ಗಾಂಜಾ ಮಾರುತ್ತಿದ್ದವನಿಗೆ ನ್ಯಾಯಾಂಗ ಬಂಧನ

19 HANUR 4
ಹೂಗ್ಯಂ ಗ್ರಾಮದ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಾಜು ಎಂಬಾತನನ್ನು ಅಬಕಾರಿ ಪೊಲೀಸರು ಬಂಧಿಸಿರುವುದು.
Published on

ಹನೂರು: ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಗುರುವಾರ ಅಬಕಾರಿ ಪೊಲೀಸರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಗ್ರಾಮದ ರಾಜು ಆಲಿಯಾಸ್ ಕೋಲ್ಗಾರ ಬಂಧಿತ. ಈತ ಮನೆಯಲ್ಲಿ ಒಣಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದನು. ಸುಮಾರು ಮಧ್ಯಾಹ್ನ 2.30ರಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಗಸ್ತಿನಲ್ಲಿದ್ದ ಕೊಳ್ಳೇಗಾಲ ಅಬಕಾರಿ ನಿರೀಕ್ಷಕ ದಯಾನಂದ್ ಅವರಿಗೆ ಈ ಬಗ್ಗೆ ಖಚಿತ ಮಾಹಿತಿ ದೊರಕಿದೆ. ಕೂಡಲೇ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಉಪ ನಿರೀಕ್ಷಕ ಶ್ರೀಧರ್, ಸಿಬ್ಬಂದಿ ರಮೇಶ್, ಸುಜನ್‌ರಾಜ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯೊಂದಿಗೆ ಮನೆ ಮೇಲೆ ದಾಳಿ ನಡೆಸಿ ಒಣಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net