

ಕನಕಗಿರಿ: ಪಟ್ಟಣದಲ್ಲಿ ತಾಲೂಕು ನ್ಯಾಯಾಲಯ ಆರಂಭಕ್ಕಾಗಿ ಇಲ್ಲಿನ 16ನೇ ವಾರ್ಡ್‌ನಲ್ಲಿನ ಮೋಚಿ ಸಮುದಾಯ ಭವನವನ್ನು ಕೊಪ್ಪಳ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಧೀಶ ಹನುಮಂತಪ್ಪ ಬನ್ನಿಕಟ್ಟಿ ನೇತೃತ್ವದ ನ್ಯಾಯಾಧೀಶರ ತಂಡ ಭಾನುವಾರ ಪರಿಶೀಲಿಸಿತು.
ಇದನ್ನೂ ಓದಿ:http://ನ್ಯಾಯಾಧೀಶರ ತಂಡದಿಂದ ಭವನ ಪರಿಶೀಲನೆ
ಭವನ ಪರಿಶೀಲಿಸಿದ ನ್ಯಾಯಧೀಶರ ತಂಡ ಸಮುದಾಯ ಭವನದಲ್ಲಿ ನ್ಯಾಯಾಲಯ ಸಂಕೀರ್ಣಕ್ಕೆ ಬೇಕಾದ ಮೂಲ ವ್ಯವಸ್ಥೆಯನ್ನು ಒದಗಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿತು.
ಕಟ್ಟಡಕ್ಕೆ ಸಂಬಂಧಿಸಿದವರು ಬಾಡಿಗೆ ನೀಡುವ ಬಗ್ಗೆ ಪತ್ರವನ್ನು ನೀಡಿದರೆ, ಉಚ್ಚ ನ್ಯಾಯಾಲಯಕ್ಕೆ ರವಾನಿಸಿ ಅನುಮತಿ ಪಡೆದುಕೊಳ್ಳಲಾಗುವುದು.
ಕಟ್ಟಡ ನ್ಯಾಯಾಲಯಕ್ಕೆ ಅನುಕೂಲಕಾರಿಯಾಗಿದ್ದು, ವಕೀಲರಿಗೆ ಬೇಕಾದ ಬಾರ್ ಕೌನ್ಸಿಲ್ ಕಟ್ಟಡ ನಿರ್ಮಿಸಬೇಕು. ಶ್ರಾವಣ ನಂತರದಲ್ಲಿ ಕೋರ್ಟ್ ಆರಂಭಿಸಲು ಶೀಘ್ರವೇ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸ್ವಂತ ಕಟ್ಟಡಕ್ಕಾಗಿ ತಹಸೀಲ್ ಕಚೇರಿಗೆ ಮೀಸಲಿರಿಸಿರುವ 144//ರಲ್ಲಿನ 3.39 ಎಕರೆ ಜಮೀನಿನ ಮಾಹಿತಿ ಪಡೆದುಕೊಂಡ ಅವರು, 287//ರಲ್ಲಿನ ಜಮೀನನ್ನು ವೀಕ್ಷಿಸಿದರು.
ಗಂಗಾವತಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ್ ಗಾಣಿಗೇರ್, ಗಂಗಾವತಿ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮುಸಾಲಿ, ವಕೀಲರಾದ ಎಸ್.ಎನ್.ನಾಯಕ, ಹನುಮೇಶ ಆರೇರ್, ಮಾರುತಿ
ಪ್ರಮುಖರಾದ ಕೆ.ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಸಿದ್ದಪ್ಪ ಕಪಲಿ, ಹನುಮಂತಪ್ಪ ಗುಡಸಲಿ, ಯಮನೂರಪ್ಪ ಸೂಡಿ, ಚನ್ನಬಸವ ಸೂಡಿ ಇದ್ದರು.
ಸಚಿವರ ವಿರುದ್ಧ ನ್ಯಾಯಾಧೀಶರ ಬೇಸರ: ಶಿವರಾಜ ತಂಗಡಗಿ ಕೇವಲ ಫೋನಿನಲ್ಲಿಯೇ ಕೋರ್ಟ್ ಆರಂಭದ ಬಗ್ಗೆ ಮಾತನಾಡುತ್ತಾರೆ. ಆದರೆ, ಆಸಕ್ತಿ ವಹಿಸುತ್ತಿಲ್ಲ ಎಂದು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಧೀಶರಾದ ಹನುಮಂತಪ್ಪ ಬನ್ನಿಕಟ್ಟಿಯವರು ಸಚಿವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ತಂಗಡಗಿ ಕ್ಷೇತ್ರಕ್ಕೆ ಶಾಸಕರಲ್ಲದೇ ಜಿಲ್ಲೆಗೆ ಸಚಿವರಾಗಿದ್ದಾರೆ. ಕೋರ್ಟ್ ಆರಂಭದ ಆಸಕ್ತಿ ಕಾಣುತ್ತಿಲ್ಲ. ನಾವೇ ಬಂದು ಕಟ್ಟಡ ವೀಕ್ಷಣೆ ಮಾಡಬೇಕಾದದ್ದು, ಬೇಸರ ತರುತ್ತಿದೆ.
ಸಚಿವರ ಆಪ್ತ ಸಹಾಯಕ ವೆಂಕಟೇಶ ಹಾಗೂ ಪಕ್ಷದ ಮುಖಂಡರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ಕೋರ್ಟ್ ಆರಂಭಕ್ಕೆ ಆಗಬೇಕಾದ ಕಾರ್ಯಗಳ ಬಗ್ಗೆ ಜಿಲ್ಲಾ ಕೋರ್ಟ್‌ಗೆ ಫಾಲೋಅಪ್ ಮಾಡಲು ಆಪ್ತ ಸಹಾಯಕ ವೆಂಕಟೇಶಗೆ ಸೂಚಿಸಿದರು.