ರಿಮ್ಸ್ ಗೆ ನ್ಯಾಯಾಧೀಶ ಹೆಚ್.ಎ.ಸಾತ್ವಿಕ್ ಭೇಟಿ: ವೈದ್ಯರ ಹಾಜರಾತಿ ಪರಿಶೀಲನೆ

raichur
raichur
Published on

ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಎ.ಸಾತ್ವಿಕ್ ಶನಿವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದರು.

ನಗರದ ಆಸ್ಪತ್ರೆಯ ಬೇರೆ ಬೇರೆ ವಿಭಾಗಗಳಿಗೆ ಭೇಟಿ ನೀಡಿದರಲ್ಲದೇ, ಆಸ್ಪತ್ರೆಯ ಪ್ರಾಂಗಣದಲ್ಲಿ ಕುಳಿತಿದ್ದ ರೋಗಿಗಳೊಂದಿಗೆ ಮಾತನಾಡಿ, ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಕೇಳಿ ಮಾಹಿತಿ ಪಡೆದರು.

ಕಿವಿ-ಮೂಗು-ಗಂಟಲು (ಇಎನ್‌ಟಿ) ವಿಭಾಗ ಮತ್ತು ನೇತ್ರ ವಿಜ್ಞಾನ ವಿಭಾಗಗಳಿಗೆ ತೆರಳಿದಾಗ ಎರಡೂ ಕಡೆಗಳಲ್ಲೂ ವೈದ್ಯರು ಇರಲಿಲ್ಲ. ಎರಡೂ ಕಡೆಗಳಲ್ಲಿಯೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಎಂಬಿಬಿಎಸ್ ಇಂಟರ್ನಿಗಳೇ ರೋಗಿಗಳನ್ನು ನೋಡುತ್ತಿರುವುದನ್ನು ನ್ಯಾಯಾಧೀಶರು ಖಚಿತಪಡಿಸಿಕೊಂಡರು. ಇಷ್ಟೊತ್ತಿನವರೆಗೆ ವೈದ್ಯರು ಇದ್ದರು ಇದೀಗ ಊಟಕ್ಕೆ ತೆರಳಿದ್ದಾರೆ ಎಂದು ಇಎನ್‌ಟಿ ಮತ್ತು ನೇತ್ರ ವಿಜ್ಞಾನ ವಿಭಾಗದಲ್ಲಿದ್ದ ಎಂಬಿಬಿಎಸ್ ಇಂಟರ್ನಿಗಳು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಅರವಿಂದ ಸಂಗಾವಿ, ಆಸ್ತಿ ವಿಭಾಗದ ಅಧಿಕಾರಿ ಬಸವರಾಜ, ಮಕ್ಕಳ ತಜ್ಞ ಡಾ.ಗೋಪಾಲ, ಮಕ್ಕಳ ಹೊರರೋಗಿ ವಿಭಾಗದ ಡಾ.ಪ್ರಕಾಶ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net