

ತರೀಕೆರೆ: ಶಿವನಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ 5 ವರ್ಷದ ಬಾಲಕಿ ಮನೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಹನುಮಂತಪ್ಪ ಭೇಟಿ ನೀಡಿ ಬಾಲಕಿಯ ಪಾಲಕರಿಗೆ ಸಾಂತ್ವಾನ ಹೇಳಿದರು.
ನಂತರ ಗ್ರಾಮದಲ್ಲಿ ಮೃತ ಬಾಲಕಿ ಕಲಿಯುತ್ತಿದ್ದ ಅಂಗನವಾಡಿಗೆ ಕೇಂದ್ರಕ್ಕೂ ತೆರಳಿ ಪರಿಶೀಲನೆ ನಡೆಸಿ, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೃತ ಬಾಲಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪಾಲಕರು ಮಕ್ಕಳ ರಕ್ಷಣೆ ಕುರಿತು ಜಾಗೃತಿ ವಹಿಸಬೇಕು. ಮಕ್ಕಳ ಯಾವುದೇ ಸಮಸ್ಯೆ ಇದ್ದರೂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕಾನೂನು ಸೇವಾ ಪ್ರಾಕಾರದ ನೆರವು ಪಡೆಯಬೇಕು ಎಂದರು.
ಸಿಡಿಪಿಒ ಎನ್.ಚರಣ್‌ರಾಜ್, ಮೇಲ್ವಿಚಾರಕಿ ಭಾಗ್ಯ ಮತ್ತಿತರರಿದ್ದರು.