ಸಂತ್ರಸ್ತರ ರಕ್ಷಣೆಗೆ ಪ್ರಾಣ ಪಣಕ್ಕಿಡುವ ಅಗ್ನಿವೀರರು

17 jlr3
Published on

ಜಗಳೂರು: ಅಗ್ನಿ ಶಮನ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ತಮ್ಮ ವೈಯಕ್ತಿಕ ಜೀವನ ಬಲಿ ಕೊಟ್ಟು ಸಾರ್ವಜನಿಕರ ಪ್ರಾಣ, ಆಸ್ತಿ, ಮಾನ ರಕ್ಷಣೆ ಮಾಡುತ್ತಾರೆ. ಅಂತಹ ವೀರ ಯೋಧರನ್ನು ಗೌರವಿಸಬೇಕು ಎಂದು ಜೆಎಂಎಫ್​ಸಿ ನ್ಯಾಯಾಧೀಶ ಆರ್. ಚೇತನ್ ಹೇಳಿದರು.

ಅಗ್ನಿಶಾಮಕ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ ಹುತಾತ್ಮ ಅಗ್ನಿಶಾಮಕ ಯೋಧರಿಗೆ ನಮನ ಅರ್ಪಿಸಿ ಮಾತನಾಡಿದರು.

ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಪ್ರಾಣ ರಕ್ಷಿಸುತ್ತಾರೆ. ಸಪ್ತಾಹ ಕೇವಲ ಕಾರ್ಯಕ್ರಮವಲ್ಲ, ಮುಂದಿನ ಕಾರ್ಯಗಳಿಗೆ ಸಿಬ್ಬಂದಿಯನ್ನು ಉತ್ತೇಜಿಸುವ ಸಮಾರಂಭ ಎಂದರು.

ಅಗ್ನಿಶಾಮಕ ಠಾಣೆ ಪ್ರಭಾರ ಠಾಣಾಧಿಕಾರಿ ಎಚ್.ಎಚ್.ದಾದಾವಲ್ಲಿ ಮಾತನಾಡಿ, ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದ ವೇಳೆ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದಕ್ಕಾಗಿ ಏ.14-20 ರವರೆಗೆ ಸೇವಾ ಸಪ್ತಾಹ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್್ಕ ಮಾತನಾಡಿ, ಅಗ್ನಿ ಅವಘಡಗಳು, ಜಲ ಕಂಟಕಗಳು ಎದುರಾದಾಗ ಅಲ್ಲಿ ಅಗ್ನಿಶಾಮಕ ಸಿಬ್ಬಂದಿ ದಿಟ್ಟತನ ಪ್ರದರ್ಶಿಸಿ ಪ್ರಾಣ ಪಣಕ್ಕಿಟ್ಟು ಸಂತ್ರಸ್ತರನ್ನು ರಕ್ಷಿಸುತ್ತಾರೆ ಎಂದರು.

ಪಪಂ ಅಧ್ಯಕ್ಷ ಕೆ.ಎಸ್. ನವೀನ್​ಕುಮಾರ್, ಸದಸ್ಯರಾದ ಲಲಿತಾ ಶಿವಣ್ಣ, ಆರೋಗ್ಯ ನಿರೀಕ್ಷಕ ಪ್ರಶಾಂತ್ ಕುಮಾರ್ ಸೇರಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net