ನ್ಯಾಯಾಧೀಶರಿಗೆ ಬೀಳ್ಕೊಡುಗೆ

Judge
Published on

ಕುಶಾಲನಗರ:

ಕುಶಾಲನಗರ ನ್ಯಾಯಾಲಯ 3 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಂಜನಗೂಡುವಿಗೆ ವರ್ಗಾ ಆಗಿರುವ ಸರಿತಾ ಕುಮಾರಿ ಅವರನ್ನು ಕುಶಾಲನಗರ ತಾಲೂಕು ವಕೀಲರ ಸಂಘದ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭ ಮಾತನಾಡಿದ ಸರಿತಾ ಕುಮಾರಿ, ಕುಶಾಲನಗರ ಸೇವೆ ಸಲ್ಲಿಸಿದ ಬಗ್ಗೆ ತಮಗೆ ತೃಪ್ತಿ ಇದೆ. ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ನ್ಯಾಯದಾನದಲ್ಲಿ ಉತ್ತಮ ಸಕಾರಿ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ವಕೀಲ ಸಂಘದ ಸದಸ್ಯ ಕೆ. ಪಿ ಶರತ್ ಪುತ್ರ ರಾಷ್ಟಿçÃಯ ಮಟ್ಟದ ಚೆಸ್ ಸಾಧಕ ಕೆ.ಎಸ್. ಚಿನ್ಮತ್, ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ಕೂಡಿಗೆ ಬಿ. ಮೋಹನ್ ಪುತ್ರಿ ಸಮೃದ್ಧಿ ಆಚಾರ್, ಪಿಯುಸಿಯಲ್ಲಿ ಶೇ. 91 ಅಂಕ ಪಡೆದ ಜಿ.ಎಲ್. ಸವಿತಾ ಪುತ್ರಿ ಯಶಸ್ವಿನಿ ಅವರನ್ನು ಇದೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕುಶಾಲನಗರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೂಡಿಗೆ ಬಿ. ಮೋಹನ್, ಉಪಾಧ್ಯಕ್ಷ ಕೆ. ಎಸ್. ವೆಂಕಟರಮಣ ರಾವ್, ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net