ಸವಣೂರಲ್ಲಿ ಸಂಭ್ರಮದ ತೊಟ್ಟಿಲೋತ್ಸವ

krishna svr
Published on

ಸವಣೂರ: ಪಟ್ಟಣದ ಶ್ರೀಸತ್ಯಬೊಧ ಸ್ವಾಮೀಜಿ ಮೂಲ ವೃಂದಾವನ ಸನ್ನಿಧಾನದಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು.

ಮೃತ್ತಿಕಾ ಪ್ರತಿಮೆಗಳ ಪೂಜೆ, ತೊಟ್ಟಿಲೋತ್ಸವ, ಅಲಂಕಾರ, ನಾಮಕರಣ ಮೊದಲಾದ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು.

ಶ್ರೀಮಠದ ಪೂಜಾಪರ್ಯಾಯಸ್ಥರಾದ ಸತ್ಯಬೋಧಾಚಾರ್ಯ ರಾಯಚೂರ, ಮುಕುಂದಾಚಾರ್ಯ ರಾಯಚೂರ, ಹಾಗೂ ಅನಂತಾಚಾರ್ಯ ರಾಯಚೂರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಪ್ರಮುಖ ರಮೇಶ ರಾಯಚೂರ, ಜಯತೀರ್ಥ ದೇಶಪಾಂಡೆ, ಸತ್ಯಪ್ರಮೋದ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net