ಜೆ ಟಿ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

IMG-20240613-WA0004
Published on

ನಗರದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಯುವ ರೆಡ್ ಕ್ರಾಸ್ ಘಟಕ, ಎನ್‌ಸಿಸಿ ಹಾಗೂ ಏನ್ ಎಸ್ ಎಸ್ ಘಟಕ, ಭಾರತ ಸ್ಕೌಟ್ ಅಂಡ್ ಗೈಡ್ಸ್ ಘಟಕ ಯುವ ರೆಡ್ ಕ್ರಾಸ್ ಜಿಲ್ಲಾ ಘಟಕದ ಐಎಂಎ ರಕ್ತಬಂಡಾರದ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿತ್ತು. ೧೯ ಸ್ವಯಂ ಸೇವಕರು ರಕ್ತದಾನವನ್ನು ಮಾಡಿದರು.

ಕಾರ್ಯಕ್ರಮಕ್ಕೆ ಯುವ ರೆಡ್ ಕ್ರಾಸ್ ಘಟಕದ ಜಿಲ್ಲಾ ಅಧ್ಯಕ್ಷರಾದ ಡಾ. ರಾಜೇಂದ್ರ ಗೋಡಬುಲೆ ಚಾಲನೆ ನೀಡಿದರು. ಪ್ರಾಚಾರ್ಯರದ ಪಿ. ಜಿ ಪಾಟೀಲ್ ಅವರು ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ಕುರಿತು ಹೇಳಿದರು. ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ರಕ್ರದಾನವೇ ಮಹಾದಾನವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಅಧಿಕಾರಿಗಳಾದ ಪ್ರೊ. ಜಗನ್ನಾಥ ಆರ್ ಏನ್ ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಡಾ. ನಾಗರಾಜ ಬಳಿಗೇರ. ಯುವರ್ ರೆಡ್ ಕ್ರಾಸ್ ಘಟಕದ ಅಧಿಕಾರಿಗಳಾದ ಪ್ರೊ. ಜಗನ್ನಾಥ್ ಮಲಗೊಂಡ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಅಧಿಕಾರಿಗಳಾದ ಪ್ರೊ. ಜಗನ್ನಾಥ್ ನಾಯಕ್. ಐಎಂಎ ರಕ್ತ ಬಂಡಾರದ ಸಿಬ್ಬಂದಿ ವರ್ಗದವರು ಹಾಗೂ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net