

ಗದಗ: ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದ ಎನ್ಸಿಸಿ ಟಕವು ವಾಷಿರ್ಕ ತರಬೇತಿ ಶಿಬಿರದಲ್ಲಿ ಸಮಗ್ರ ವೀರಾಗ್ರಹಣ ಪ್ರಶಸ್ತಿ ಪಡೆದುಕೊಂಡಿದೆ ಎಂದು ಕೆಎಲ್ಇ ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯು, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಜೆಎನ್ವಿ ನವೋದಯ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ 10 ದಿನದ ತರಬೇತಿ ಶಿಬಿರದಲ್ಲಿ 600 ಕೆಡೆಟ್ ಗಳು ಹಾಗೂ 20 ವಿವಿಧ ಶಾಲಾ ಕಾಲೇಜುಗಳು ಭಾಗವಹಿಸಿದ್ದವು. ಈ ತರಬೇತಿ ಶಿಬಿರದಲ್ಲಿ ಕೆಡೆಟ್ ಗಳಿಗೆ ವಿವಿಧ ತರಬೇತಿಯೊಂದಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು . ಅದರಲ್ಲಿ ಮಹಾವಿದ್ಯಾಲಯವು ಡ್ರಿಲ್ ವಿಭಾಗದಲ್ಲಿ ಪ್ರಥಮ ಸ್ಥಾನ, ಸಾಂಸತಿಕ ನೃತ್ಯದಲ್ಲಿ ಪ್ರಥಮ ಸ್ಥಾನ, ಥ್ರೋ ಬಾಲ್ ತೃತೀಯ, ಕೋ ಕೋ ತೃತೀಯ, ಹಗ್ಗ ಜಗ್ಗಾಟ ತೃತೀಯ ಸ್ಥಾನ ಪಡೆದುಕೊಂಡು ಒಟ್ಟಾರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂದೆ. ಅತ್ಯುತ್ತಮ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಸಮಗ್ರ ವೀರಗ್ರಾಣಿ ಪ್ರಶ್ತಿ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.