ಜೆ.ಟಿ.ಮಹಾವಿದ್ಯಾಲಯದಲ್ಲಿ ಒಂದು ದಿನದ ವಿಚಾರ ಸಂಕಿರಣ

13GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ಹೆಣ್ಣು ಪುರುಷನಷ್ಟೇ ಸಮಾನವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿದ್ದು ಆಧುನಿಕ ಭಾರತ ನಿರ್ಮಾಣ ಮಾಡಲು ಹೆಣ್ಣಿನ ಪಾತ್ರ ಬಹುಮುಖ್ಯವಾಗಿದೆ ಎಂದು ಮಹಿಳಾ ಉದ್ಯಮಿ ನಂದಾ ಬಾಳೆಹಳ್ಳಿಮಠ ಹೇಳಿದರು.

ಕೆ.ಎಲ್​.ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರವಿಭಾಗ ಹಾಗೂ ಗದಗ ಜಿಲ್ಲಾ ವಾಣಿಜೋದ್ಯಮ ಸಂಸ್ಥೆ ಸಹಯೋಗದಲ್ಲಿ ಮಹಿಳಾ ಉದ್ಯಮಿಗಳ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿ ನಿತ್ಯ ಮಾಡುವ ಸಣ್ಣ ಕೆಲಸಗಳನ್ನು ಯಶಸ್ವಿಯಾಗಿ ಮಾಡಬೇಕು. ಮಹಿಳೆಯರಿಗೆ ಸಣ್ಣ ಉದ್ಯಮಗಳಾದ ಉಪ್ಪಿನಕಾಯಿ ತಾಯಾರಿಕೆ, ಟೈಲರಿಂಗ್​, ರೊಟ್ಟಿ ತಯಾರಿಕೆ, ಕೇಟರಿಂಗ್​ ಹೀಗೆ ಕೌಶಲ್ಯವಿರುವ ಉದ್ಯಮವನ್ನು ಪ್ರಾರಂಭಿಸಿ ಸ್ವಾಲಂಭಿ ಆಗಬೇಕು ಎಂದರು.

ಉಪನ್ಯಾಸಕಿ ಜಯಶ್ರೀ ಪಾಟೀಲ್​ ಮಾತನಾಡಿ, ಉದ್ಯಮ ಆರಂಭದಲ್ಲಿ ಉನ್ನತಮಟ್ಟದ ಲಾಭಂಶ ಪಡೆಯದಿದ್ದರೂ ನಿರುತ್ಸಾಹ ತೋರದೇ ವ್ಯಾಪಾರವನ್ನು ನಿಲ್ಲಿಸಬಾರದು. ದೃಢವಾದ ನಿರ್ಧಾರ ಹಾಗೂ ಧೈರ್ಯವಾಗಿ ವ್ಯಾಪರಾದಲ್ಲಿ ಮುನ್ನುಗ್ಗಬೇಕು ಎಂದರು.

ಪ್ರೊ. ಎಚ್​. ಎಸ್​. ಕೌಲಗಿ ಮಾತನಾಡಿ, ಹೆಣ್ಣು ಮನೆಯಲ್ಲಿ ಮಾಡುವ ಕೆಲಸಕ್ಕೆ ಯಾರೊಬ್ಬರಿಂದಲು ಬೆಲೆ ಕಟ್ಟಲು ಸಾಧ್ಯವಿಲ್ಲ, ಹೆಣ್ಣು ಈ ಜಗದ ಕಣ್ಣು. ಹಾಗಾಗಿ ವಿದ್ಯಾಥಿರ್ನಿಯರು ದೊಡ್ಡ ಉದ್ಯಮಿಗಳಾಗಿ ಬೆಳೆಯಬೇಕು ಎಂದರು.

ಪ್ರೊ. ಜಗನ್ನಾಥ್​ ಆರ್​, ಡಾ. ಕುಮಾರ್​ ಎಚ್​. ಕೆ, ವೇಧಾ, ಸುಷ್ಮಾ ಇತರರು ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net