ಗ್ರಾಮೀಣಾಭಿವೃದ್ಧಿಗೆ ಜೆಎಸ್‌ಡಬ್ಲ್ಯು ಒತ್ತು

18 SANDOOR 01
ಬೆಂಗಳೂರಿನಲ್ಲಿ ಆಯೋಜಿಸಿದ್ದ ರೋಟರಿ ಇಂಡಿಯಾ ರಾಷ್ಟ್ರೀಯ ಸಿಎಸ್‌ಆರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯು ಫೌಂಡೇಷನ್‌ಗೆ ರೋಟರಿ ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಫೌಂಡೇಷನ್ ದಕ್ಷಿಣ ಭಾರತದ ವಲಯ ಮುಖ್ಯಸ್ಥ ಪೆದ್ದಣ್ಣ ಬಿಡಾಲ, ಹಿರಿಯ ವ್ಯವಸ್ಥಾಪಕ ರಾಜಶೇಖರ ರಾಜು ಪ್ರಶಸ್ತಿ ಸ್ವೀಕರಿಸಿದರು.
Published on

ಸಂಡೂರು: ಚೆಕ್‌ಡ್ಯಾಮ್ ಮತ್ತು ಕೃಷಿ ಹೊಂಡ ಮುಂತಾದ ಜಲ ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ ಜಲ ಸಂಪನ್ಮೂಲ ಹೆಚ್ಚಿಸಿರುವುದರಿಂದ 1,500ಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಜೆಎಸ್‌ಡಬ್ಲ್ಯು ಫೌಂಡೇಷನ್ ದಕ್ಷಿಣ ಭಾರತದ ವಲಯ ಮುಖ್ಯಸ್ಥ ಪೆದ್ದಣ್ಣ ಬಿಡಾಲ ಹೇಳಿದರು.

ಬೆಂಗಳೂರಿನಲ್ಲಿ ರೋಟರಿ ಇಂಡಿಯಾ ರಾಷ್ಟ್ರೀಯ ಸಿಎಸ್‌ಆರ್ ಪ್ರಶಸ್ತಿ ಸ್ವೀಕರಿಸಿ ಶುಕ್ರವಾರ ಮಾತನಾಡಿದರು. ಜೆಎಸ್‌ಡಬ್ಲ್ಯು ಫೌಂಡೇಷನ್‌ನ ಶಿಕ್ಷಣ ಮತ್ತು ಜಲ ನಿರ್ವಹಣೆ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಸಮಗ್ರ ಕಲಿಕೆಗೆ ಉತ್ತೇಜನ, ಜೀವನ ಕೌಶಲಗಳ ಅಭಿವೃದ್ಧಿ, ಫಲಿತಾಂಶ ಸುಧಾರಣೆ ಮತ್ತು ಶಾಲೆಯ ಮೂಲ ಸೌಕರ್ಯಗಳಿಂದ 1,564 ಶಾಲೆಗಳ, 1,83,749ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಪ್ರಶಸ್ತಿಗಳು ಸುಸ್ಥಿರ ಅಭಿವೃದ್ಧಿ ಮತ್ತು ಸಮುದಾಯಗಳ ಸಬಲೀಕರಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಜೆಎಸ್‌ಡಬ್ಲ್ಯು ಫೌಂಡೇಷನ್ ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net