

ಹುಬ್ಬಳ್ಳಿ: ನಗರದ ಭಗತ್ಸಿಂಗ್ ವೃತ್ತದಲ್ಲಿರುವ ಕಮಲ್ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ನ ಆವರಣದಲ್ಲಿ ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ನ ಜೆಎಸ್ಡಬ್ಲ್ಯು ಎಕ್ಸ್ಪೀರಿಯನ್ಸ್ ಸೆಂಟರ್ನ ಉದ್ಘಾಟನೆ ಸೋಮವಾರ ನಡೆಯಿತು.
ಉದ್ಘಾಟನೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ ಅಶ್ರಫ್ ಅಲಿಖಾನ್, ಹುಬ್ಬಳ್ಳಿಯ ಜೆಎಸ್ಡಬ್ಲ್ಯು ಎಕ್ಸ್ಪೀರಿಯನ್ಸ್ ಸೆಂಟರ್ ಕರ್ನಾಟಕ ರಾಜ್ಯದಲ್ಲಿ ಮೊದಲ ಹಾಗೂ ದೇಶದಲ್ಲಿ 8ನೇಯದ್ದಾಗಿದೆ. ಇನ್ನು ಮುಂದೆ ಕರ್ನಾಟಕದಲ್ಲಿ 7 ಸೇರಿ ದೇಶದಲ್ಲಿ 27 ಹೊಸ ಎಕ್ಸ್ಪೀರಿಯನ್ಸ್ ಸೆಂಟರ್ ತೆರೆಯುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.
ಹಿರಿಯ ಉಪಾಧ್ಯಕ್ಷ (ಮಾರ್ಕೆಟಿಂಗ್) ವಿಶ್ವನಾಥನ್ ಮಾತನಾಡಿ, ಎಕ್ಸ್ಪೀರಿಯನ್ಸ್ ಸೆಂಟರ್ ಒಂದು ವಿನೂತನವಾದ ಪರಿಕಲ್ಪನೆಯಾಗಿದೆ. ಗ್ರಾಹಕರಿಗೆ ನಮ್ಮ ಉತ್ಪನ್ನಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಗ್ರಾಹಕರಲ್ಲಿ ಬ್ರ್ಯಾಂಡ್ ಅರಿವು ಹೆಚ್ಚಸಲಿದೆ ಮತ್ತು ಖರೀದಿ ನಿರ್ಧಾರಗಳನ್ನು ಸುಗಮಗೊಳಿಸಲಿದೆ ಎಂದರು.
ಕಮಲ್ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ನ ಮಾಲೀಕ ಕಮಲ ಮೆಹ್ತಾ, ಮೋಹಿತ ಮೆಹ್ತಾ, ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ನ ಇರ್ಷಾದ ಅಲಿಖಾನ್, ಸಂಜಯ ಅಲಮೇಲಕರ ಇದ್ದರು.