

ವಿಜಯವಾಣಿ ಸುದ್ದಿಜಾಲ ಧಾರವಾದ
ದೆಹಲಿಯ ಇನ್‌ಟ್ಯಾಕ್ ಸಂಸ್ಥೆಯು ನಡೆಸಿದ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಅವನಿ ಮಹೀಂದ್ರಕರ ಪ್ರಾದೇಶಿಕ ವಿಜೇತರಾಗಿ ಆಯ್ಕೆಯಾಗಿದ್ದಾಳೆ.
ಅವನಿ ಮಹೀಂದ್ರಕರ ಜೆಎಸ್‌ಎಸ್ ಕ್ಯಾಂಪಸ್‌ಗೆ ಹೊಂದಿಕೊ0ಡಿರುವ ಶ್ರೀ ಮೈಲಾರಲಿಂಗ ಸ್ವಾಮಿಯ ಕಥೆಯನ್ನು ಚಿತ್ರಿಸುವ ಮೂಲಕ ಸ್ಪರ್ಧೆಯಲ್ಲಿ ಗೆದ್ದಿದ್ದಾಳೆ. ವಿಜೇತ ವಿದ್ಯಾರ್ಥಿನಿ ಅವನಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಇನ್‌ಟ್ಯಾಕ್ ಧಾರವಾಡ ಸಂಚಾಲಕ ಕರ್ನಲ್ ಮೋಹನ್ ಮಠ ಮತ್ತು ಪ್ರಾಚಾರ್ಯೆ ರೇಣು ಪಾಟೀಲ ಅಭಿನಂದಿಸಿದರು.