

ಹನೂರು : ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ರಾಮಾಪುರ ಜೆಎಸ್‌ಎಸ್ ಶಾಲೆ ವಿದ್ಯಾರ್ಥಿಗಳ ವಿವಿಧ ಆಟೋಟಗಳಲ್ಲಿ ಜಯಗಳಿಸಿದ್ದಾರೆ. ಗುಂಡು ಎಸೆತದಲ್ಲಿ ಶರಣ್, ತಟ್ಟೆ ಎಸೆತದಲ್ಲಿ ಕೌಶಿಕ್, 400 ಮೀಟರ್ ಓಟದಲ್ಲಿ ತ್ರಿಗುಣ ಪ್ರಥಮ ಸ್ಥಾನ, ವಾಲಿಬಾಲ್‌ನಲ್ಲಿ ಬಾಲಾಜಿ ತಂಡ ಹಾಗೂ ಕಬಡ್ಡಿಯಲ್ಲಿ ಕೌಶಿಕ್ ತಂಡ ಪ್ರಥಮ ಸ್ಥಾನ ಗಳಿಸಿದೆ. ತಟ್ಟೆ (ಡಿಸ್ಕಸ್) ಎಸೆತದಲ್ಲಿ ಶರಣ್, 400 ಮೀ ಓಟದಲ್ಲಿ ಬಾಲಾಜಿ, 600 ಮೀ ಓಟದಲ್ಲಿ ಕಿರಣ್, 4*100 ಮೀ. ಓಟದಲ್ಲಿ ಕೌಶಿಕ್ ತಂಡ, ಉದ್ದ ಜಿಗಿತದಲ್ಲಿ ಕೌಶಿಕ್, ತಟ್ಟೆ ಎಸೆತದಲ್ಲಿ ಬೃಂದಾ, ಕಬಡ್ಡಿ, ಥ್ರೋಬಾಲ್‌ನಲ್ಲಿ ಬಾಲಕಿಯರ ತಂಡ, ಹಾಗೂ ಖೋ, ಖೋ ದಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಎತ್ತರ ಜಿಗಿತದಲ್ಲಿ ಕಿರಣ್, ಗುಂಡು ಹಾಗೂ ತಟ್ಟೆ ಎಸೆತದಲ್ಲಿ ಧನಲಕ್ಷ್ಮೀ, ಎತ್ತರ ಜಿಗಿತದಲ್ಲಿ ಅನುಷಾ, 100ಮೀ. ಓಟದಲ್ಲಿ ಸಂದೀಪ್, 400 ಮೀ. ಓಟದಲ್ಲಿ ನಲ್ಲಿ ಪ್ರತೀಕ್ಷಾ ಹಾಗೂ 600 ಮೀ. ಓಟದಲ್ಲಿ ಪವಿತ್ರಾ ತೃತೀಯ ಸ್ಥಾನ ಪಡೆದಿದ್ದಾರೆ. ಕ್ರೀಡಾಕೂಟದಲ್ಲಿ ಸಾಧನೆಗೈದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಶ್ರೀಕಂಠ ಅಭಿನಂದಿಸಿದ್ದಾರೆ.