ಗ್ಲೋಬಲ್ ಮೆಡ್ ಲ್ಯಾಬ್ ವೀಕ್-2025 ವಿಡಿಯೋ ಸ್ಪರ್ಧೆಯಲ್ಲಿ ಜೆಎಸ್ ಎಸ್ ಗೆ ಪ್ರಥಮ ಸ್ಥಾನ

16
Published on

ಮೈಸೂರು: ಬೆಲ್ಜಿಯಂನ ಬ್ರಸ್ಸೆಲ್ಸ್‌ನಲ್ಲಿ ಅಂತಾರಾಷ್ಟ್ರೀಯ ಕ್ಲಿನಿಕಲ್ ಕೆಮಿಸ್ಟ್ರಿ ಮತ್ತು ಲ್ಯಾಬೊರೇಟರಿ ಮೆಡಿಸಿನ್ ಫೆಡರೇಶನ್ (ಐಎಫ್‌ಸಿಸಿ) ಆಯೋಜಿಸಿದ್ದ ಗ್ಲೋಬಲ್ ಮೆಡ್ ಲ್ಯಾಬ್ ವೀಕ್-2025 ವಿಡಿಯೋ ಸ್ಪರ್ಧೆಯಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗವು ಪ್ರಥಮ ಬಹುಮಾನ ಪಡೆದಿದೆ.

ಬ್ರಸ್ಸೆಲ್ಸ್‌ನಲ್ಲಿ ಮೇ 18ರಿಂದ 22ರವರೆಗೆ ಆಯೋಜಿಸಿದ್ದ ಲ್ಯಾಬೊರೇಟರಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖವಾದ ಜಾಗತಿಕ ಸಮಾರಂಭಗಳಲ್ಲೊಂದಾದ ಐಎಫ್‌ಸಿಸಿ ಯೂರೋ ಮೆಡ್‌ಲ್ಯಾಬ್-2025 ಸಮ್ಮೇಳನದ ಸಂದರ್ಭ ಪ್ರದಾನ ಮಾಡಲಾಯಿತು. ವಿಜೇತ ತಂಡದಲ್ಲಿ ಡಾ. ಅಖಿಲಾ ಪ್ರಶಾಂತ್, ಡಾ. ಪ್ರಶಾಂತ್‌ವಿಶ್ವನಾಥ್ ಮತ್ತು ಡಾ. ಕಾರ್ತಿಕ್ ಕನಕೂರ್ ಪ್ರಶಸ್ತಿ ಸ್ವೀಕರಿಸಿದರು.

ಈ ವರ್ಷದ ಸ್ಪರ್ಧೆಯ ವಿಷಯ ಲ್ಯಾಬ್‌ಗಳು ಜೀವ ಉಳಿಸುತ್ತವೆ ಎಂಬುದಾಗಿದ್ದು, ಆರೋಗ್ಯ ಸೇವೆಯಲ್ಲಿ ಲ್ಯಾಬೊರೇಟರಿಗಳ ಪಾತ್ರವನ್ನು ಬೆಳಕಿಗೆ ತರುವ ಉದ್ದೇಶವನ್ನು ಹೊಂದಿತ್ತು. ವಿಶ್ವದ ವಿವಿಧ ಭಾಗಗಳಿಂದ ಒಟ್ಟು 27 ವಿಡಿಯೋಗಳು ಸ್ಪರ್ಧೆಗೆ ಸಲ್ಲಿಸಲಾಗಿತ್ತು. ಇದರಲ್ಲಿ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ವಿಶ್ವ ವಿದ್ಯಾಲಯದ ಕುಲಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net