ಮಹರ್ಷಿ ವಾಲ್ಮೀಕಿ ರವರ ಜಯಂತಿ

07 SARAG 3 JSS
Published on

ಸರಗೂರು: ಪಟ್ಟಣದ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ಸರಗೂರು ವತಿಯಿಂದ ಮಂಗಳವಾರ ದಂದು ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ನಂತರ ಮಾತನಾಡಿದ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಕೆ  ಎಸ್.ರವರು ರಾಮಾಯಣವನ್ನು ರಚಿಸಿದ ಕಾರಣ ವಾಲ್ಮೀಕಿಯನ್ನು "ಆದಿ ಕವಿ" (ಮೊದಲ ಕವಿ) ಎಂದು ಗೌರವಿಸಲಾಗುತ್ತದೆ. ಅವರು ಸಂಸ್ಕೃತದ ಒಬ್ಬ ಋಷಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ.

ವಾಲ್ಮೀಕಿ ಮುನಿಯು ತಮಸಾ ನದಿಯ ದಡದಲ್ಲಿದ್ದಾಗ ಅಲ್ಲಿಗೆ ನಾರದರು ಬರುತ್ತಾರೆ. ಆಗ ಅವರು ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳಿಗೆ ವಿವರಿಸುತ್ತಾರೆ. ಅದನ್ನು ವಾಲ್ಮೀಕಿ ಶ್ಲೋಕರೂಪದಲ್ಲಿ ಪ್ರಸುತ ಪಡಿಸುತ್ತಾರೆ ಎಂಬ ಮಾತು ಇದೆ. ಇದರೊಂದಿಗೆ ತಮಸಾ ನದಿಯ ದಡದಲ್ಲಿ ಸಂತೋಷದಿಂದ ಹಾರಾಡುತ್ತಿದ್ದ ಜೋಡಿ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ಬಾಣ ಹೂಡುತ್ತಾನೆ. ಆಗ ಗಂಡು ಪಕ್ಷಿ ಪ್ರಾಣ ಕಳೆದುಕೊಳ್ಳುತ್ತದೆ. ಹೆಣ್ಣು ಕ್ರೌಂಚ ಪಕ್ಷಿಯ ನೋವು ಕಂಡ ವಾಲ್ಮೀಕಿ ಮಹರ್ಷಿ ಬೇಡನಿಗೆ ಶೋಕದಿಂದ ಶಾಪ ಕೊಡಲು ಮುಂದಾಗುತ್ತಾರೆ, ಶಾಪವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಇದು ರಾಮಾಯಣ ರಚಿಸಲು ಮೂಲವಾಯಿತು ಎಂಬ ಮಾತು ಇದೆ ಎಂದರು. ಈ ಸಂದರ್ಭದಲ್ಲಿ  ಪ್ರೌಢಶಾಲಾ ಮುಖ್ಯ ಶಿಕ್ಷಕ ನಾಗರತ್ನ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಯಣ್ಣ, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net