ಕರಾಟೆಯಲ್ಲಿ ಜೆಎಸ್‌ಎಸ್ ವಿದ್ಯಾರ್ಥಿನಿ ಪ್ರಥಮ

22 Dwd 3
Published on

ಧಾರವಾಡ: ಎ.ಜಡ್. ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಆಯೋಜಿಸಿದ್ದ 18ನೇ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ ಹಾಗೂ ಡಾ. ಪುನೀತ್ ರಾಜಕುಮಾರ್ ಮೆಮೋರಿಯಲ್ ಕಪ್ ಪಂದ್ಯಾವಳಿಯಲ್ಲಿ ನಗರದ ವಿದ್ಯಾಗಿರಿ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಸೃಷ್ಟಿ ದುಮ್ಮಾಳ ಎಲ್ಲೋ ಬೆಲ್ಟ್ ಕೆಟಗರಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಚಿನ್ನದ ಪದಕ ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಅಭಿನಂದಿಸಿದರು. ಪ್ರಾಚಾರ್ಯೆ ಸಾಧನಾ ಎಸ್., ಮಹಾವೀರ ಉಪಾಧ್ಯೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net