ಅವಕಾಶ ಸದುಪಯೋಗಪಡಿಸಿಕೊಂಡರೆ ಯಶಸ್ಸು ಖಚಿತ

16 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಗುರಿಯಿಂದ ವಿಚಲಿತರಾಗಬಾರದು. ಒತ್ತಡ ಮುಕ್ತರಾಗಿ, ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಸಿಕ್ಕ ಅವಕಾಶಗಳ ಸದುಪಯೋಗಪಡಿಸಿಕೊಂಡು ಯಶಸ್ಸು ಕಾಣಬೇಕು ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತç ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಂ. ರತ್ನಾಕರ ಹೇಳಿದರು.

ನಗರದ ಜೆಎಸ್‌ಎಸ್ ಎಸ್‌ಎಂ ಪಿ.ಯು. ಕಾಲೇಜಿನ 2024- 25ನೇ ವಾರ್ಷಿಕ ಸ್ನೇಹ ಸಮ್ಮೇಳನದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಗುರುಗಳು ನಮ್ಮ ಶಕ್ತಿ. ಉತ್ತಮ ಶಿಕ್ಷಕರು ಮತ್ತು ಸ್ನೇಹತರಿದ್ದರೆ ಸಾಧನೆ ಸುಲಭ. ಅವಕಾಶ ನೀಡಿದ ವ್ಯಕ್ತಿಗಳಿಗೆ ನಾವು ಋಣಿಯಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಕನಸನ್ನು ನನಸಾಗಿಸಲು ದೃಢಸಂಕಲ್ಪದಿ0ದ ಶ್ರಮಿಸಬೇಕು ಎಂದರು.

ಎಸ್‌ಎ0 ಪಿ.ಯು. ಕಾಲೇಜಿನ ಪ್ರಾಚಾರ್ಯ ರವಿವರ್ಮ ಜೋಶಿ ಸ್ವಾಗತಿಸಿದರು. ವಿಧ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ಎಸ್.ಕೆ. ನಡುವಿನಕೇರಿ ಪರಿಚಯಿಸಿದರು. ಕ್ರೀಡಾ ನಿರ್ದೇಶಕ ಪವನ ಗೊರವರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ರಕ್ಷಿತಾ ಚೌಕಿಮಠ ಹಾಗೂ ಜಂಟಿ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ನಾಯ್ಕ ವೇದಿಕೆಯಲ್ಲಿದ್ದರು. ಪ್ರಸಕ್ತ ಸಾಲಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net