ಜೆಎಸ್ಎಸ್ ಸಿಬಿಎಸ್ಇ ಶಾಲೆ ವಾರ್ಷಿಕ ಪ್ರಶಸ್ತಿ ಪ್ರದಾನ

Published on

ಹುಬ್ಬಳ್ಳಿ: ಇಲ್ಲಿಯ ಜೆಎಸ್ಎಸ್ ಸಿಬಿಎಸ್ಇ ಶಾಲೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ಏರ್ಪಡಿಸಲಾಗಿತ್ತು.

ಅತಿಥಿಗಳಾಗಿದ್ದ ಮಹಾನಗರ ಪಾಲಿಕೆ ಸದಸ್ಯ ಸಂತೋಷ ಚೌಹಾಣ, ಮಾಜಿ ಮೇಯರ್ ಅಶ್ವಿನಿ ಮಜ್ಜಗಿ ಅವರು, ಶಾಲೆಯಲ್ಲಿ ನಡೆದ ವಿವಿಧ ಚಟುವಟಿಕೆಗಳು ಮತ್ತು ಕ್ರೀಡೆ, ಶೈಕ್ಷಣಿಕ ಹಾಗೂ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಿದರು.

ಮುಖ್ಯೋಪಾಧ್ಯಾಯ ರಜನಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ಶಿಕ್ಷಣ ಸಮಿತಿಯು ಮಕ್ಕಳ ಕ್ರಿಯಾತ್ಮಕತೆ ಗುರುತಿಸಿ ಆ ಕ್ಷೇತ್ರಕ್ಕೆ ತಕ್ಕಂತೆ ಸೂಕ್ತ ಬಹುಮಾನ ನೀಡುತ್ತ ಬಂದಿದೆ. ಮಕ್ಕಳ ಸೃಜನಾತ್ಮಕತೆ ಮತ್ತು ಪ್ರತಿಭೆಯನ್ನು ಹೊರ ತರಲು ಶಾಲೆಯು ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಪಾಲಕರು ಭಾವನಾತ್ಮಕವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net