ಜೆಎಸ್‌ಎಸ್ ಶಾಲೆ ಸಮಗ್ರ ವೀರಾಗ್ರಣಿ

16 Dwd 4
Published on

ಧಾರವಾಡ: ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 70 ವಿದ್ಯಾರ್ಥಿಗಳು 2023- 24ನೇ ಸಾಲಿನ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿ ಸಮಗ್ರ ವೀರಾಗ್ರಣಿಯಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಮಹಾವೀರ ಉಪಾಧ್ಯೆ, ಡಾ. ಸೂರಜ್ ಜೈನ್, ಉಷಾ ಸಂತೋಷ, ನಿರ್ಮಲಾ ಪಾಟೀಲ, ಇತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net