ಜೆಎಸ್‌ಎಸ್ ರಂಗೋತ್ಸವಕ್ಕೆ ಸಂಭ್ರಮದ ತೆರೆ

jss rangotsava
Published on

ಮೈಸೂರು: ರಂಗ ಚಟುವಟಿಕೆಗಳು ಮಕ್ಕಳಿಗೆ ಮನರಂಜನೆಯ ಜತೆಗೆ ಅವರ ಮನಸ್ಸಿನ ವಿಕಾಸಕ್ಕೂ ಸಹಕಾರಿಯಾಗಿವೆ ಎಂದು ಸಾಹಿತಿ ಡಾ. ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜೆಎಸ್‌ಎಸ್ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಮೂಹ ಮಾಧ್ಯಮಗಳು ಮಕ್ಕಳ ಮೇಲೆ ಬಹಳ ವೇಗವಾಗಿ ಪ್ರಭಾವ ಬೀರುತ್ತವೆ. ನಾಟಕ, ನೃತ್ಯ, ಸಂಗೀತಗಳು ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತವೆ. ಮಕ್ಕಳಲ್ಲಿ ವೈಚಾರಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ಹೇಳಿದರು.

ರಂಗ ಚಟುವಟಿಕೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಸರಿ ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯ ಬೆಳೆಯುತ್ತದೆ. ರಂಗಭೂಮಿಯು ಮಕ್ಕಳು ಎದುರಿಸುವ ಖಿನ್ನತೆಗಳನ್ನು ದೂರ ಮಾಡಿ ಅವರಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಜನಪದ ವಿದ್ವಾಂಸರಾದ ಡಾ. ಸುಜಾತಾ ಅಕ್ಕಿ ಮಾತನಾಡಿ, ಮೈಸೂರು ಸೀಮೆಯು ಕನ್ನಡ ಸಂಸ್ಕೃತಿ, ಕಲೆ, ಪರಂಪರೆಗಳಿಗೆ ವಿಶಿಷ್ಟವಾದ ನೆಲೆಯನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net