ಜೆಎಸ್‌ಎಸ್ ಸ್ನಾತಕೋತ್ತರ ಸಂಸ್ಥೆಗೆ 3 ರ‍್ಯಾಂಕ್

12 Dwd 7 Swati Kulkarni
Published on

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಎಂಎಸ್.ಸಿ ಕಂಪ್ಯೂಟರ್ ಸೈನ್ಸ್ ಹಾಗೂ ಎಂಎಸ್.ಸಿ ರಸಾಯನಶಾಸ್ತç ವಿಭಾಗದ ಫಲಿತಾಂಶ ಪ್ರಕಟವಾಗಿದೆ. ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಸಂಸ್ಥೆಗೆ 3 ರ‍್ಯಾಂಕ್‌ಗಳು ದೊರಕಿವೆ. ಎಂಎಸ್.ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ವಾತಿ ಕುಲಕರ್ಣಿ ಪ್ರಥಮ, ಎಂಎಸ್.ಸಿ ರಸಾಯನಶಾಸ್ತçದಲ್ಲಿ ಬಸವರಾಜ ದೊಡ್ಡಮನಿ ಪ್ರಥಮ ಹಾಗೂ ಮಂಜುಷಾ ಕರಿಮುದಕ್ಕಣ್ಣವರ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net