ವಿಶೇಷ ಚೇತನರ ಜೆಎಸ್ಎಸ್ ಪಾಲಿಟೆಕ್ನಿಕ್, ಪ್ರಯೋಜನ ಪಡೆಯಲು ಉಪಪ್ರಾಚಾರ್ಯ ಶಿವಕುಮಾರಸ್ವಾಮಿ ಮನವಿ

IMG_20240529_111150_43-1.jpg
Published on

ಹುಬ್ಬಳ್ಳಿ: ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪಿಠದ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ನಲ್ಲಿ ಅಂಗವಿಕಲ ಮಕ್ಕಳಿಗೆ ಡಿಪ್ಲೋಮಾ ಹಂತದ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದ್ದು, ಇದು ಅವರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಸಂಸ್ಥೆಯ ಉಪಪ್ರಾಚಾರ್ಯ ಶಿವಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ನಿಂದ ಅನುಮೋದನೆ ಪಡೆದು ಆಕಿರ್ಟೆಕ್ಚರ್, ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್, ಕರ್ಮಷಿಯಲ್ ಪ್ರಾಕ್ಟಿಸ್, ಜುವೇಲರಿ ಡಿಸೈನ್ ಹಾಗೂ ಟೆಕ್ನಾಲಜಿ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಶನ್ ಹಾಗೂ ಅಪೇರಲ್ ಡಿಸೈನ್ ಹಾಗೂ ಫ್ಯಾಬ್ರಿಕೇಶನ್ ಟೆಕ್ನಾಲಜಿ ಸೇರಿ ಏಳು ಡಿಪ್ಲೋಮಾ ಕೋರ್ಸ್ಗಳನ್ನು ಮೂರು ವರ್ಷದ ಅವಧಿಗೆ ನಡೆಸಲಾಗುತ್ತಿದೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೈಹಿಕ ಅಂಗವಿಕಲತೆ, ಶ್ರವಣದೋಷ ಹಾಗೂ ಅಂಧತ್ವವುಳ್ಳ ವಿದ್ಯಾಥಿರ್ಗಳು ಪ್ರವೇಶ ಪಡೆಯಲು ಅರ್ಹರು. ಜೂನ್ 15ರೊಳಗೆ ಅಜಿರ್ ಸಲ್ಲಿಸಿ ಮಕ್ಕಳು ಪ್ರವೇಶ ಪಡೆಯಬಹುದಾಗಿದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದರು.

ಈಗಾಗಲೇ ಸಂಸ್ಥೆಯಲ್ಲಿ 3 ಸಾವಿರ ವಿದ್ಯಾಥಿರ್ಗಳು ಅಧ್ಯಯನ ಮಾಡಿ ಉದ್ಯೋಗ ಕಂಡುಕೊಂಡಿದ್ದಾರೆ. ಕ್ಯಾಂಪಸ್ ಸಂದರ್ಶನದಲ್ಲಿ ಶೇ. 90ರಷ್ಟು ವಿದ್ಯಾಥಿರ್ಗಳು ಆಯ್ಕೆಯಾಗಿದ್ದಾರೆ. ಕಲಿಕಾ ಅವಧಿಯಲ್ಲಿ ಸ್ಕಾಲರಶಿಪ್, ಬಡತನ ಹಿನ್ನೆಲೆಯುಳ್ಳವರಿಗೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಸ್ಥೆಯ ಸದಸ್ಯರಾದ ಎಂ. ರಘು, ಜಿ.ಆರ್. ನಿಡವಣಿ, ಡಾ. ಪಳನಿಸ್ವಾಮಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net