ಜೆಎಸ್‌ಎಸ್ ಕಾಲೇಜು ಸಮಗ್ರ ವೀರಾಗ್ರಣಿ

14 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆತಿಥ್ಯದಲ್ಲಿ ಆಯೋಜಿಸಿದ್ದ 71ನೇ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜೆಎಸ್‌ಎಸ್ ಎಸ್‌ಎಂಐ ಸಂಸ್ಥೆ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಯಿತು. ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜು ರನ್ನರ್ ಅಪ್ ಹಾಗೂ ಹೊನ್ನಾವರ ಎಂಪಿಇಎಸ್ ಎಸ್‌ಡಿಎಂ ಕಾಲೇಜು 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಪುರುಷರ ವಿಭಾಗದಲ್ಲಿ 65, ಮಹಿಳಾ ವಿಭಾಗದಲ್ಲಿ 97, ಮಿಕ್ಸ್ ರಿಲೇಯಲ್ಲಿ 10 ಸೇರಿ 172 ಅಂಕಗಳೊ0ದಿಗೆ ಜೆಎಸ್‌ಎಸ್ ಎಸ್‌ಎಂಐ ಯುಜಿ ಪಿಜಿ ಸಂಸ್ಥೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪುರುಷರ ವಿಭಾಗದಲ್ಲಿ 52, ಮಹಿಳಾ ವಿಭಾಗದಲ್ಲಿ 22, ಮಿಕ್ಸ್ ರಿಲೇಯಲ್ಲಿ 6 ಸೇರಿ 80 ಅಂಕಗಳೊ0ದಿಗೆ ಕರ್ನಾಟಕ ಆರ್ಟ್ಸ್ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

ಪುರುಷರ ವಿಭಾಗದಲ್ಲಿ 37, ಮಹಿಳೆಯರ ವಿಭಾಗದಲ್ಲಿ 17, ಮಿಕ್ಸ್ ರಿಲೇಯಲ್ಲಿ 2 ಅಂಕಗಳೊ0ದಿಗೆ ಹೊನ್ನಾವರದ ಎಂಪಿಇಎಸ್ ಎಸ್‌ಡಿಎಂ ಪದವಿ ಕಾಲೇಜು 2ನೇ ರನ್ನರ್ ಆಪ್ ಪ್ರಶಸ್ತಿ ಪಡೆಯಿತು.

97 ಅಂಕಗಳೊ0ದಿಗೆ ಧಾರವಾಡದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕಕೋತ್ತರ ಅಧ್ಯಯನ ಸಂಸ್ಥೆ ಪ್ರಥಮ ಸ್ಥಾನ ಪಡೆಯಿತು. 32 ಅಂಕಗಳೊ0ದಿಗೆ ಮಣಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ರನ್ನರ್ ಆಪ್ ಪಡೆಯಿತು. 22 ಅಂಕಗಳೊ0ದಿಗೆ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜು 2ನೇ ರನ್ನರ್ ಆಪ್ ಪ್ರಶಸ್ತಿ ಪಡೆಯಿತು.

65 ಅಂಕಗಳೊ0ದಿಗೆ ಧಾರವಾಡದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕಕೋತ್ತರ ಅಧ್ಯಯನ ಸಂಸ್ಥೆ ಪ್ರಥಮ ಸ್ಥಾನ ಪಡೆಯಿತು. 52 ಅಂಕಗಳೊ0ದಿಗೆ ಕರ್ನಾಟಕ ಆರ್ಟ್ಸ್ ಕಾಲೇಜು ತಂಡ ರನ್ನರ್ ಆಪ್ ಹಾಗೂ 37 ಅಂಕಗಳೊ0ದಿಗೆ ಹೊನ್ನಾವರ ಎಂಪಿಇಎಸ್ ಎಸ್‌ಡಿಎಂ ಪದವಿ ಕಾಲೇಜು 2ನೇ ರನ್ನರ್ ಆಪ್ ಪ್ರಶಸ್ತಿ ಪಡೆಯಿತು.

ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ ಬೆಸ್ಟ್ ಅಥ್ಲೀಟ್ ಪ್ರಶಸ್ತಿಗೆ ಭಾಜನರಾದರು.

ಗದಗನ ಪ್ರಭು ರಾಜೇಂದ್ರ ಪದವಿ ಕಾಲೇಜಿನ ಮೇಘಾ ಮುನವಳ್ಳಿಮಠ ಮಹಿಳಾ ಬೆಸ್ಟ್ ಅಥ್ಲೀಟ್ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net