ಪ್ರಮಾಣಪತ್ರ ವಿತರಣೆ

18 Dwd 2
Published on

ಧಾರವಾಡ: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಂಗಳವಾರ ಕಲಿಕಾ ಪ್ರಮಾಣಪತ್ರಗಳನ್ನು ವಿತರಿಸಿದರು. ಹಣಕಾಸು ಮಾರುಕಟ್ಟೆಯ ವಿಷಯಗಳನ್ನು ಕಲಿತು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಡಾ. ಅಜಿತ ಪ್ರಸಾದ್ ಶುಭ ಹಾರೈಸಿದರು. ಬಿ.ಬಿ.ಎ ವಿಭಾಗದ ಮುಖ್ಯಸ್ಥೆ ಪ್ರೊ. ನಾಗವೇಣಿ ಪುಡಕಲಕಟ್ಟಿ, ಎಂ.ಕಾಂ ಮುಖ್ಯಸ್ಥೆ ಪ್ರೊ. ವಿಭಾ ಮೊಗಲಿ, ತರಬೇತುದಾರ ಪ್ರೊ. ಅವಿನಾಶ ಹೊಳಿಹೊಸೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net