

ಶಿವಮೊಗ್ಗ: ಬಳ್ಳಾರಿಯಲ್ಲಿ ಆಯೋಜಿಸಿರುವ ಬಿಜೆಪಿಯ ಪರಿಶಿಷ್ಟ ಪಂಗಡಗಳ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ಗ್ರಾಮಾಂತರ ಭಾಗದಿಂದ 600ಕ್ಕೂ ಅಧಿಕ ಕಾರ್ಯಕರ್ತರು ಹತ್ತಾರು ಬಸ್‌ಗಳಲ್ಲಿ ತೆರಳಿದರು.
ಭಾನುವಾರ ಬೆಳಗ್ಗೆ ನಗರದ ಬಿಜೆಪಿ ಕಚೇರಿ ಬಳಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಖಾಸಗಿ ಬಸ್‌ಗೆ ಹಸಿರು ನಿಶಾನೆ ತೋರಿ ಬಳ್ಳಾರಿಗೆ ಪ್ರಯಾಣಿಸುತ್ತಿರುವ ಕಾರ್ಯಕರ್ತರಿಗೆ ಶುಭ ಹಾರೈಸಿದರು.
ಕುಂಸಿ, ಕೊನಗವಳ್ಳಿ, ಹೊಳೆಹೊನ್ನೂರು, ಸುತ್ತುಕೋಟೆ, ಬುಳ್ಳಾಪುರ, ಬೇಡರ ಹೊಸಳ್ಳಿ, ಮುದುವಾಲ, ಆಯನೂರು, ರಾಮೇನಕೊಪ್ಪ ಸೇರಿ 13 ಸ್ಥಳದಿಂದ 12 ಬಸ್‌ಗಳು ಶಿವಮೊಗ್ಗದಿಂದ ತೆರಳಿದವು. ಗ್ರಾಮಾಂತರ ಭಾಗದ ಮುಖಂಡ ರತ್ನಾಕರ್ ಶಣೈ ಮತ್ತಿತರರಿದ್ದರು.