ರಾಮನಗರಕ್ಕೆ ಮಾಜಿ ಶಾಸಕ ಸುನಿಲ ಹೆಗಡೆ ಭೇಟಿ

17-JOYIDA- SUNIL
Published on

ಜೊಯಿಡಾ: ರಾಮನಗರದ ಪೊಲೀಸ್ ಠಾಣೆ ಎದುರು ಭಾಸ್ಕರ ಬಾಂಡೋಲ್ಕರ್ ಎಂಬಾತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶನಿವಾರ ಮಾಜಿ ಶಾಸಕ ಸುನಿಲ ಹೆಗಡೆ ಭೇಟಿ ನೀಡಿದರು.
ಎಸ್‌ಪಿ ಎಸ್. ವಿಷ್ಣುವರ್ಧನ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾಸ್ಕರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತವಾಗಿ ಅದಷ್ಟು ಬೇಗ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಎಎಸ್‌ಪಿ ಸಿ.ಟಿ. ಜಯಕುಮಾರ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ಗೋಸಾವಿ, ಸುಭಾಷ ಗಾವಡಾ, ಪ್ರಸನ್ನ ಗಾವಡಾ, ಅಜಿತ ಮಿರಾಶಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net