ಶಕ್ತಿ ಯೋಜನೆಯಡಿ ಶತಕೋಟಿ ನಾರಿಯರ ಪ್ರಯಾಣ

ksrtc
Published on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಮಹಿಳೆಯರುಗೆ ಉಚಿತ ಪ್ರಯಾಣ ಕಲ್ಪಿಸಲಾಗಿದ್ದು, ಈ ಯೋಜನೆಯಡಿ ರಾಜ್ಯದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಶತ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಜೂನ್ ೧೧ ರಿಂದ ನವೆಂಬರ್ ೨೨ ವರೆಗೆ ಶತಕೋಟಿ ಮಹಿಳೆಯರು ಉಚಿತ ಪ್ರಯಾಣಸುವ ಮೂಲಕ ಯೋಜನೆಯ ಲಾಭ ಪಡೆದಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ ೨೩೯೭ ಕೋಟಿ ರೂ. ಮಹಿಳೆಯರ ಟಿಕೆಟ್ ವೆಚ್ಚವಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ೨೫೦೦ ಕೋಟಿ ರೂ. ತಲುಪಲಿದೆ. ಇದುವರೆಗೂ ೨೩೯೭ಕೋಟಿ ವ್ಯಯವಾಗಿದೆ.
ಜೂನ್ ೧೧ ರಿಂದ ನವೆಂಬರ್ ೨೨ ರವರೆಗೂ ೧೦೦.೪೭ ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಅಂದರೆ ಕಳೆದ ೧೬೫ ದಿನಗಳಲ್ಲಿ ೧೦೦,೪೭,೫೬,೧೮೪ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯ ೨೩೯೭ ಕೋಟಿ ರೂ. ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net