ಸಮಾಜ ತಿದ್ದುವ ಪತ್ರಕರ್ತರು

8MNL2
Published on

ಮುನವಳ್ಳಿ: ನಾರದರು ಲೋಕ ಕಲ್ಯಾಣಕ್ಕಾಗಿ ತ್ರಿಲೋಕ ಸಂಚಾರ ಮಾಡುತ್ತ ದೇವದಾನವರಿಗೂ ಪ್ರಿಯರಾಗಿ ಜವಾಬ್ದಾರಿಯುತ ಪತ್ರಕರ್ತನಂತೆ ಕೆಲಸ ಮಾಡುತ್ತಿದ್ದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಬೋಧಕ ಡಾ. ಆರುಣ ಹೊಸಮಠ ಹೇಳಿದರು.

ಪಟ್ಟಣದ ಸೋಮಶೇಖರಮಠದಲ್ಲಿ ನಾರದ ಜಯಂತಿ ಪ್ರಯಕ್ತ ಬೆಳಗಾವಿ ಜನಕಲ್ಯಾಣ ಟ್ರಸ್ಟ್​ ಪತ್ರಕರ್ತರಿಗೆ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಾರದರು ಮೇಲ್ನೋಟಕ್ಕೆ ಪರಸ್ಪರ ಜಗಳ ಹಚ್ಚುತ್ತಾರೆ. ಚಾಡಿ ಹೇಳುತ್ತಾರೆ ಎಂದೆನಿಸಿದರೂ ಅವರ ಮೂಲ ಉದ್ದೇಶ ಲೋಕಕಲ್ಯಾಣವೇ ಆಗಿರುತ್ತಿತ್ತು. ಅದರಂತೆ ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.

ಸೋಮಶೇಖರಮಠದ ಮುರುಂದ್ರ ಶ್ರೀಗಳು ಮಾತನಾಡಿ, ನಾರದರು ಬ್ರಹ್ಮಾಂಡದ ಮೊದಲ ಸಂದೇಶವಾಹಕ. ದೇವದಾನವರು ನಾರದರ ಸಲಹೆ ಕೇಳಿ ಪಾಲಿಸುತ್ತಿದ್ದರು. ಅದರಿಂದ ದುಷ್ಟವಿಚಾರದ ಸಂಹಾರವೇ ಆಗುತ್ತಿತ್ತು ಎಂದರು.

ಆರ್​ಎಸ್​ಎಸ್​ ಜಿಲ್ಲಾ ಸಂಚಾಲಕ ಸಿ.ಬಿ. ದೊಡಗೌಡರ ಅಧ್ಯತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂದ ರಾಜ್ಯ ಉಪಾಧ್ಯ ಪಿ. ಬಿ.ಬಾಳೋಜಿ, ಪತ್ರಕರ್ತರಾದ ಪ್ರಶಾಂತ ತುಳಜಣ್ಣವರ, ಮಹಾಂತೇಶ ಗಿಲಾಕಿ, ಗಿರೀಶ ರೇವಡಿ, ಮಲ್ಲನಗೌಡ ಪಾಟೀಲ, ಟಿ.ಎನ್​.ಮುರಂಕರ, ಚಂದ್ರಕಾಂತ ಸಂಗಟಿ, ಶಿವಾನಂದ ಬಳಿಗಾರ, ಯಲ್ಲಪ್ಪ ಕೊಪ್ಪದ, ಲಕ್ಷ$್ಮಣ ಮೊಹರೆ, ರಾಜು ಮಹೇಂದ್ರಕರ, ವೀರೇಶ ಬೆಣಚಿನಮರಡಿ, ಮಹಾಂತೇಶ ಬೆಲ್ಲದ, ಮಲ್ಲೇಶ ಕುಂಬಾರ, ಆರ್​ಎಸ್​ಎಸ್​ ಸಂಚಾಲಕರಾದ ನರಸಿಂಹ ಜೋಶಿ, ಕುಮಾರಸ್ವಾಮಿ ತಲ್ಲೂರಮಠ, ಸೋಮು ಗರಗದ, ಶ್ರೀನಿವಾಸ ಕಮ್ಮಾರ, ಜಗದೀಶ ನಂದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net