

ದಾಂಡೇಲಿ: ಸದೃಢ ಸಮಾಜ ನಿರ್ವಣವಾಗುವಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಸಮಾಜದ ಅಂಕು ಡೊಂಕುಗಳನ್ನು ವರದಿಗಳ ಮೂಲಕ ತಿದ್ದಿ ತೀಡುವ ಮಹತ್ವದ ಕಾರ್ಯನಿರ್ವಹಿಸುವ ಪತ್ರಕರ್ತರ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಲಯನ್ಸ್ ಕ್ಲಬ್ಬನ ಅಧ್ಯಕ್ಷೆ ಡಾ. ಗೌರಿ ಎಸ್.ಹಂಚಿನಾಳಮಠ ಹೇಳಿದರು.
ನಗರದ ಲಯನ್ಸ್ ಕ್ಲಬ್ ವತಿಯಿಂದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಂದೇಶ್ ಎಸ್.ಜೈನ್, ಬಿ.ಎನ್. ವಾಸರೆ, ಗುರುಶಾಂತ ಜಡೆಹಿರೇಮಠ, ಕೃಷ್ಣಾ ಪಾಟೀಲ, ಪ್ರವೀಣಕುಮಾರ ಸುಲಾಖೆ, ಅಕ್ಷಯಗಿರಿ ಗೋಸಾವಿ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ರುಬೀನಾ ಅತ್ತಾರ್, ಖಜಾಂಚಿ ಸುಮಂಗಲಾ ಚಿಕ್ಕಮಠ, ಉಪಾಧ್ಯಕ್ಷೆ ಲತಾ ಉದಯ ಶೆಟ್ಟಿ, ಡಾ. ಶೇಖರ ಹಂಚಿನಾಳಮಠ, ಅನಿಲ ದಂಡಗಲ್, ಉದಯ ಶೆಟ್ಟಿ, ಇಮ್ಮಿಯಾಜ್ ಅತ್ತಾರ, ಗಜಾನನ ಕರಂಗಾವಕರ, ಮೋಹನ ಸನದಿ, ಶಾರದಾ ದಂಡಗಲ್, ಸವಿತಾ ವೀರೇಶ ಯರಗೇರಿ, ನೇಹಾ ನರೇಂದ್ರ ಚವ್ಹಾಣ ಇತರರು ಇದ್ದರು.