ಪತ್ರಕರ್ತರಿಗೆ ಉಚಿತ ಪುನಶ್ಚೇತನ ಕಾರ್ಯಾಗಾರ

mmmmmmmmmmm
Published on



ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಒಂದು ದಿನದ ಉಚಿತ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲು ಉದ್ದೇಶಿಸಲಾಗಿದೆ.
ವೃತ್ತಿ ರಂಗದ ಆಧುನಿಕ ಸವಾಲುಗಳಿಗೆ ಪರಿಹಾರ, ಪರಿಣಾಮಕಾರಿ ವರದಿಗಾರಿಕೆ ಮತ್ತು ಬರವಣಿಗೆಯಲ್ಲಿ ಸುಧಾರಣೆ, ಮಾನಸಿಕ ಒತ್ತಡ ನಿವಾರಣೆ, ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೈಬರ್‌ಲಾ ಮತ್ತಿತರ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸುವ ಪತ್ರಕರ್ತರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕು. (ನಿಗದಿತ ಸಂಖ್ಯೆಯ ಸದಸ್ಯರಿಗೆ ಮಾತ್ರ ಅವಕಾಶ ಇರುವುದರಿಂದ ನೋಂದಣಿ ಕಡ್ಡಾಯ). ಮಾಧ್ಯಮ ಸಂಸ್ಥೆ ಪ್ರತಿಯೊಂದು ಕಚೇರಿಯಿಂದ ಗರಿಷ್ಠ 3 ಮಂದಿಗೆ, ತಾಲೂಕು ಸಂಘಗಳಿಂದ ತಲಾ 5 ಮಂದಿಗೆ ಭಾಗವಹಿಸಲು ಅವಕಾಶ ಇದೆ. ಕಾರ್ಯಾಗಾರದ ದಿನಾಂಕ, ಸ್ಥಳವನ್ನು ಮುಂದೆ ತಿಳಿಸಲಾಗುವುದು. ಹೆಸರು ನೋಂದಣಿಗೆ ಅಕ್ಟೋಬರ್ 05, ಕೊನೆಯ ದಿನವಾಗಿದೆ. ಇದೇ ಮಾದರಿಯ ಕಾರ್ಯಾಗಾರ ಮುಂದಿನ ಹಂತಗಳಲ್ಲಿ ನಡೆಯಲಿದ್ದು ಉಳಿದವರಿಗೆ ಅವಕಾಶ ಕಲ್ಪಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಕಾರ್ಯಾಗಾರದ ಸಂಯೋಜಕರಾದ ವಿಜಯ ಕೋಟ್ಯಾನ್- 9448503582, ಆರ್..ಸಿ.ಭಟ್- 9448216722 ಇವರುಗಳನ್ನು ಸಂಪರ್ಕಿಸಬಹುದೆಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net