ವರದಿಗಾರರ ಸುದ್ದಿ ಬರಹ ಸಮಾಜ ಸಂತಸ ಪಡುವಂತಿರಬೇಕು

IMG-20230706-WA0003.jpg
Published on

ಚಿಕ್ಕೋಡಿ(ಬೆಳಗಾವಿ) : ವರದಿಗಾರರ ಸುದ್ದಿಗಳು ಸಮಾಜ ಒಪ್ಪುವಂತಿರಬೇಕು.ಸಂತೋಷ ಪಡುವಂತಿರಬೇಕಯ ಎಂದು ೭ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಹೇಳಿದರು.

ಗುರುವಾರ ಚಿಕ್ಕೋಡಿ ಪಟ್ಟಣದ ಡಯಟ್ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಚಿಕ್ಕೋಡಿ ಸಹಯೋಗದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಸದಸ್ಯತ್ವ ಕಾರ್ಡ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವರದಿಗಾರರು ಸತ್ಯಾಸತ್ಯತೆ ಅರಿತು ನೇರ,ದಿಟ್ಟ, ನೈಜತೆಯ ವರದಿಗಾರಿಕೆಯನ್ನು ಮಾಡಬೇಕೆಂದರು..

ಸಮಾರಂಭದಲ್ಲಿ ೭ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಮಾತನಾಡಿದರು. ಗಣ್ಯರು ಇದ್ದರು.
ಸಮಾರಂಭದಲ್ಲಿ ೭ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಮಾತನಾಡಿದರು. ಗಣ್ಯರು ಇದ್ದರು.

ಪತ್ರಿಕಾರಂಗವು ಸಂವಿಧಾನದ ೧೯ರ ಅಡಿಯಲ್ಲಿ ಮಾನ್ಯತೆಯನ್ನು ಪಡೆದಿದೆ. ವರದಿಗಾರರು ಸುದ್ದಿಯನ್ನು ಬರೆಯಬೇಕಾದಲ್ಲಿ ಘಟನಾ ಸ್ಥಳಕ್ಕೆ ತೆರಳಿ ಸತ್ಯಾಸತ್ಯತೆಯನ್ನು ಅರಿತು ನಿಖರವಾದ ವರದಿಗಾರಿಕೆಯನ್ನು ಮಾಡಬೇಕು.ಸುಳ್ಳು ವರದಿಗಾರಿಕೆಯನ್ನು ಮಾಡಿದರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬಿಳುತ್ತದೆ.ಅಂತಹ ವರದಿಗಾರರ ಮೇಲೆ ಮಾನಹಾನಿ ಕೇಸ್ ಕೂಡಾ ಮಾಡಬಹುದು ಎಂದರು.

ಉಪವಿಭಾಗಧಿಕಾರಿ ಮಾಧವ ಗಿತ್ತೆ ಮಾತನಾಡಿ, ಪತ್ರಕರ್ತರು ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು.ಸತ್ಯನಿಷ್ಠೆಯ ವರದಿಗಾರಿಕೆಯನ್ನು ಮಾಡಬೇಕು. ಪತ್ರಕರ್ತರು ಒಳ್ಳೆಯ ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದರು.
ಚಿಕ್ಕೋಡಿಯಲ್ಲಿ ಪತ್ರಕರ್ತರ ಸಲುವಾಗಿ ಕಚೇರಿ ಜೊತೆಗೆ ಪತ್ರಿಕಾಭವನ ನಿರ್ಮಿಸಲು ಸೂಕ್ತ ಜಾಗೆ ನೀಡುವುದಾಗಿ ಭರವಸೆ ನೀಡಿದರು.

ಚಿಕ್ಕೋಡಿ ಡೈಟ್ ಸಭಾಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಸದಸ್ಯತ್ವ ಕಾರ್ಡ ವಿತರಣೆ ಸಮಾರಂಭವನ್ನು ೭ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಉದ್ಘಾಟಿಸಿದರು, ಉಪವಿಭಾಗಾಧಿಕಾರಿ ಮಾಧವ ಗಿತ್ತೆ,ತಹಶೀಲ್ದಾರ,ಡಿವೈಎಸ್‌ಪಿ ಬಸವರಾಜ ಯಲಿಗಾರ, ಚಿದಂಬರ ಕುಲಕರ್ಣಿ ಉಪಸ್ಥಿತರಿದ್ದರು.
ಚಿಕ್ಕೋಡಿ ಡೈಟ್ ಸಭಾಭವನದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಸದಸ್ಯತ್ವ ಕಾರ್ಡ ವಿತರಣೆ ಸಮಾರಂಭವನ್ನು ೭ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಉದ್ಘಾಟಿಸಿದರು, ಉಪವಿಭಾಗಾಧಿಕಾರಿ ಮಾಧವ ಗಿತ್ತೆ,ತಹಶೀಲ್ದಾರ,ಡಿವೈಎಸ್‌ಪಿ ಬಸವರಾಜ ಯಲಿಗಾರ, ಚಿದಂಬರ ಕುಲಕರ್ಣಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿಯ ಡಯಟ್ ಪ್ರಾಚಾರ್ಯ ಮೋಹನ ಜೀರಗಿಹಾಳ ಮಾತನಾಡಿ, ಈ ಹಿಂದೆ ಪತ್ರಕರ್ತರೂ ಜಾಣರಿದ್ದರು, ಓದುಗರು ಜಾಣರಿದ್ದರು. ಆದ್ರೆ ಇದೀಗ ಅಂತವರ ಸಂಖ್ಯೆ ಶೇ ೮೦ ರಷ್ಟು ಮಾತ್ರ ಇದೆ. ಪತ್ರಿಕೆಗೆ ಸಂಪಾದಕೀಯ ಬಹಳ ಮುಖ್ಯವಾಗಿರುತ್ತದೆ. ಇಡೀ ಪತ್ರಿಕೆಯು ಒಂದು ವಿಶ್ವ ಕೋಶ ಇದ್ದಂತೆ. ಹಾಗಾಗಿ ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ" ಎಂದರು.
ಸಂದರ್ಭದಲ್ಲಿ ಡಿವೈಎಸ್ಪಿ ಬಸವರಾಜ ಯಲಿಗಾರ, ತಹಸೀಲ್ದಾರ್ ಚಿದಂಬರ ಕುಲಕರ್ಣಿ, ಪತ್ರಿಕೋದ್ಯಮ ಉಪನ್ಯಾಸಕ ಸದಾಶಿವ ಹಾದಿಮನಿ, ಪತ್ರಕರ್ತರಾದ ವಿರುಪಾಕ್ಷಿ ಕವಟಗಿ, ಸುಭಾಷ ದಲಾಲ್, ಮಹಾದೇವ ಪೂಜೇರಿ, ಕಾಶಿನಾಥ ಸುಳಕುಡೆ, ಸಂತೋಷ ಕಾಮತ, ಮಹಾವೀರ ಚಿಂಚಣೆ, ಸಂಜೀವ ಕಾಂಬಳೆ, ಲೋಹಿತ ಶಿರೋಳ, ಡಿ.ಕೆ.ಉಪ್ಪಾರ, ಸುಧೀರ ಕುಂಭೋಜಕರ, ಮಹಾಂತೇಶ ಕುರಬೇಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.. ಪ್ರೇಸ್ ಕ್ಲಬ್ ಅಧ್ಯಕ್ಷ ರಾಜು ಸಂಕೇಶ್ವರಿ ಸ್ವಾಗತಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಚಿನಕೇಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net