ಪತ್ರಕರ್ತ ರಮೇಶ್ ಹಂಡ್ರಂಗಿ ನಿಧನ

ಪತ್ರಕರ್ತ ರಮೇಶ್ ಹಂಡ್ರಂಗಿ ನಿಧನ
Published on

ಹಾಸನ: ಪತ್ರಕರ್ತ ರಮೇಶ್ ಹಂಡ್ರಂಗಿ (35) ಶುಕ್ರವಾರ ನಿಧನರಾಗಿದ್ದಾರೆ. ಮನೆಯ ಕೊಠಡಿಯಲ್ಲಿ ನೆಲದ ಮೇಲೆ ಮಲಗಿದ ಸ್ಥಿತಿಯಲ್ಲಿ ಅವರು ಮೃತಪಟ್ಟಿದ್ದಾರೆ.

ನಗರದ ವಿಶ್ವೇಶ್ವರಯ್ಯ ಬಡಾವಣೆಯ ಸಹೋದರಿಯ ಮನೆಯಲ್ಲಿ ರಮೇಶ್ ನೆಲೆಸಿದ್ದರು. ಸಹೋದರಿ ಹೇಮಾ ಗುರುವಾರ ಸಂಬಂಧಿಕರ ತಿಥಿ ಕಾರ್ಯಕ್ಕೆ ತೆರಳಿದ್ದರು. ಶುಕ್ರವಾರ ಸಂಜೆ ಮನೆಗೆ ಬಂದು ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ನಿಖರ ಕಾರಣ ತಿಳಿದುಬಂದಿಲ್ಲ. ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ತಾಯಿ ಮಣಿ, ತಂದೆ ರಾಮೇಗೌಡ, ಸಹೋದರ ರೇವಂತ್ ಅರಕಲಗೂಡಿನ ಹಂಡ್ರಂಗಿ ಗ್ರಾಮದಲ್ಲಿ ನೆಲೆಸಿದ್ದಾರೆ. ಪಾಲಕರು ಆಗಮಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುತ್ತದೆ. ಅರಕಲಗೂಡಿನ ಹಂಡ್ರಂಗಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net