ಪತ್ರಕರ್ತನಿಗೆ ಗಾಯ: ಬಂದ್ ನಿಂದ ಹಿಂದೆ ಸರಿದ ಕರವೇ ಕಾರ್ಯಕರ್ತರು

IMG-20201205-WA0061
Published on

ಸಿಂದಗಿ: ಪತ್ರಕರ್ತನೋರ್ವನಿಗೆ ಗಾಯವಾದ ಹಿನ್ನೆಲೆ ಕರವೇ ಕಾರ್ಯಕರ್ತರು ಬಂದ್ ನಿಂದ ಹಿಂದೆ ಸರಿದ ಘಟನೆ ಸಿಂದಗಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ಬಂದ್ ಆಚರಣೆ ವೇಳೆ ಪತ್ರಕರ್ತ ಮುರುಗೇಶ ಹಿಟ್ಟಿ ಎಂಬುವರಿಗೆ ಬಲವಾದ ಗಾಯವಾಗಿದೆ.

ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಶಾಸಕ ಯತ್ನಾಳ, ಸಿಎಂ ಬಿಎಸ್ ವೈ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ತಹಸೀಲ್ದಾರ್  ಸಂಜೀವಕುಮಾರ ದಾಸರ‌ ಅವರಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ವೇಳೆ ವರದಿಗೆ ಬಂದ ಪತ್ರಕರ್ತನಿಗೆ ಎತ್ತು ಗುದ್ದಿದ ಪರಿಣಾಮ ವರದಿಗಾರನ ಕಾಲಿಗೆ ಗಾಯವಾಗಿ ಕುಸಿದು ಬಿದ್ದನು. ಇದರಿಂದ ಮಾನವೀಯ ನೆಲೆಗಟ್ಟಿನಿಂದ ಹೋರಾಟ ಸ್ಥಗಿತಗೊಳಿಸುತ್ತಿರುವುದಾಗಿ ಹೋರಾಟಗಾರರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net