ಚಿಕಿತ್ಸೆಗೆ ಸಹಾಯದ ನಿರೀಕ್ಷೆಯಲ್ಲಿ ಪತ್ರಕರ್ತ

kidney
Published on

ಕುಂಬಳೆ: ಹಲವು ವರ್ಷಗಳಿಂದ ಕುಂಬಳೆಯಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರತರಾಗಿರುವ ಅಬ್ದುಲ್ಲ ಕುಂಬಳೆ ಕಿಡ್ನಿ ರೋಗದ ಚಿಕಿತ್ಸೆಯಲ್ಲಿದ್ದಾರೆ. ಎರಡೂ ಕಿಡ್ನಿಗಳು ಗಾತ್ರದಲ್ಲಿ ಚಿಕ್ಕದಾಗುತ್ತಿರುವ ಅಪೂರ್ವ ರೋಗ ಬಾಧಿಸಿರುವ ಇವರು ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಪೂರ್ಣ ಆರೋಗ್ಯವಂತನಾಗಬೇಕಾದರೆ ಅತಿ ಶೀಘ್ರ ಕಿಡ್ನಿ ಬದಲಾಯಿಸಿ ಅಳವಡಿಸಬೇಕೆಂದು ವೈದ್ಯರು ತಿಳಿಸಿದ್ದಾರೆ. ಭಾರಿ ಮೊತ್ತ ಅಗತ್ಯವುಳ್ಳ ಈ ಶಸ್ತ್ರಚಿಕಿತ್ಸೆಗೆ ಹಣ ಸಂಗ್ರಹಿಸಲಾಗದೆ ಅಬ್ದುಲ್ಲ ಹಾಗೂ ಕುಟುಂಬ ಸಂಕಷ್ಟದಲ್ಲಿ ತೊಳಲಾಡುವಂತಾಗಿದೆ.

ಈ ಹಿನ್ನೆಲೆಯಲ್ಲಿ ಇವರಿಗೆ ಸಹಾಯವೊದಗಿಸಲು ಅಬ್ದುಲ್ಲ ಚಿಕಿತ್ಸಾ ಸಹಾಯ ಸಮಿತಿ ರೂಪೀಕರಿಸಲಾಗಿದೆ. ಸಹೃದಯರ ಉದಾರ ನೆರವು ನಿರೀಕ್ಷಿಸಲಾಗಿದ್ದು, ಸಹಾಯ ನೀಡಬೇಕಾದ ಬ್ಯಾಂಕ್‌ನ ಪೂರ್ಣ ಮಾಹಿತಿ:

ಕೆನರಾ ಬ್ಯಾಂಕ್ ಕುಂಬಳೆ ಶಾಖೆ: ಖಾತೆ ನಂಬ್ರ: 110179038769 ಐ.ಎಫ್.ಎಸ್.ಸಿ:: ಸಿ.ಎನ್.ಆರ್.ಬಿ. 0014206ಗೂಗಲ್ ಪೇ/ಫೋನ್ ಪೇ 8590216232 / 9947188385.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net