ಸರ್ಕಾರ, ಜನರ ನಡುವಿನ ಸೇತುವೆ ಪತ್ರಿಕೋದ್ಯಮ

Journalism is the bridge between the government and the people.
ಲೋಕಾಪುರ ರಾಮಕೃಷ್ಣ ಪರಮಹಂಸ ಶಿಕ್ಷಣ ಸಂಸ್ಥೆಯ ಸಿರಿಗನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಲಿಂ ಕೊಪ್ಪದ ಅವರನ್ನು ಸನ್ಮಾನಿಸಲಾಯಿತು. ಕಾಶಿನಾಥ ಹುಡೇದ, ಹಸನಡೋಂಗ್ರಿ ಮಹಾಲಿಂಗಪುರ, ಬಂದೇನವಾಜ ರಾಮದುರ್ಗ, ಸಿದ್ದು ಹೂಗಾರ, ಶ್ರೀನಿವಾಸ ಬಬಲಾದಿ ಮತ್ತಿತರರಿದ್ದರು.
Published on

ಲೋಕಾಪುರ : ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ಜನರ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸಲು ಪತ್ರಿಕೋದ್ಯಮ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕುರಿ ಮತ್ತು ಉಣ್ಣೆ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.

ಪಟ್ಟಣದ ರಾಮಕೃಷ್ಣ ಪರಮಹಂಸ ಶಿಕ್ಷಣ ಸಂಸ್ಥೆಯ ಸಿರಿಗನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆದ ಗಣರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಲಿಂ ಕೊಪ್ಪದ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಪತ್ರಕರ್ತರು ಪಕ್ಷ, ಜಾತಿ, ವ್ಯಕ್ತಿಯ ಪರವಾಗಿ ಸುದ್ದಿಗಳನ್ನು ಪ್ರಕಟಿಸದೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವಸ್ತುನಿಷ್ಠ ವರದಿಗಳಿಗೆ ಒತ್ತು ನೀಡಬೇಕು. ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಪತ್ರಕರ್ತ ಹಸನ್ ಡೋಂಗ್ರಿ ಮಹಾಲಿಂಗಪೂರ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಸಲಿಂ ಕೊಪ್ಪದ ಅವರಿಗೆ ಪ್ರಶಸ್ತಿ ದೊರೆತಿದ್ದು ಎಲ್ಲರಿಗೂ ಸಂತಸ ತಂದಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಲಿಂ ಕೊಪ್ಪದ, ನನ್ನ ಅಲ್ಪಸೇವೆಯನ್ನು ಮನಗಂಡು ಪ್ರಶಸ್ತಿಗೆ ಆಯ್ಕೆ ಮಾಡಿದ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಇನ್ನೂ ಹೆಚ್ಚಿನ ಪತ್ರಿಕಾ ಸೇವೆ ಮಾಡಲು ಅನುವು ಮಾಡಿಕೊಟ್ಟಿದೆ ಎಂದರು.

ಸಂಸ್ಥೆ ಅಧ್ಯಕ್ಷ ಹಾಗೂ ಪತ್ರಕರ್ತ ಸಿದ್ದು ಹೂಗಾರ, ಬಂದೇನವಾಜ ರಾಮದುರ್ಗ, ಶ್ರೀನಿವಾಸ ಬಬಲಾದಿ, ಸಂಸ್ಥೆಯ ಸಂಯೋಜಕ ಮಂಜುಳಾ ದಂಡಗಿ, ಅಶೋಕ ಶಿರೂರ, ರವಿಕುಮಾರ ಸನದಿ, ಕೃಷ್ಣಾ ದಳವಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net