ಜ್ಯೋತಿಷ್ಯದ ವೈಜ್ಞಾನಿಕ ಅಧ್ಯಯನ ನಡೆಯಲಿ, ಜ್ಯೋತಿಷಿ ಎಂ.ಎಸ್. ಉಮಾಪತಿ ಅಭಿಮತ

IMG-20240526-WA0023.jpg
Published on

ಹುಬ್ಬಳ್ಳಿ: ಜ್ಯೋತಿಷ್ಯ, ವಾಸ್ತು ಇವುಗಳೆಲ್ಲ ನಿತ್ಯ ಜೀವನದಲ್ಲಿ ಪ್ರತಿಯೊಬ್ಬರಿಗೂ ಉಪಯುಕ್ತವಾದ ಸನಾತನ ವಿದ್ಯೆಯಾಗಿವೆ. ವೈಜ್ಞಾನಿಕ ದೃಷ್ಟಿಯಲ್ಲಿ ಇದರ ಅಧ್ಯಯನ ನಡೆಯಬೇಕು ಎಂದು ಖ್ಯಾತ ಜ್ಯೋತಿಷಿ ಎಂ.ಎಸ್. ಉಮಾಪತಿ ಹೇಳಿದರು.

ಇಲ್ಲಿಯ ಅಖಿಲ ಕರ್ನಾಟಕ ಜ್ಯೋತಿವಿರ್ಜ್ಞಾನ ಸಂಶೋಧನಾ ಸಂಸ್ಥೆಯ 25ನೇ ಘಟಿಕೋತ್ಸವ ಹಾಗೂ ವಾಷಿರ್ಕ ಸ್ನೇಹಕೂಟವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಯೋತಿವಿರ್ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಕಾರ್ಯವನ್ನು ವಿದ್ವಾನ್ ಗಣೇಶ ಹೆಗಡೆ ಅವರು ಸಂಸ್ಥೆಯ ಮೂಲಕ ಕಳೆದ 25ವರ್ಷಗಳಿಂದ ನಿರಂತರ ಹಾಗೂ ಬಹಳ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದಾರೆ. ಜ್ಯೋತಿಷ್ಯ ವಿದ್ಯಾಥಿರ್ಗಳು ಈ ಶಾಸ್ತ್ರವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬೆಳೆಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಗಣೇಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಲ್ಲಿ ಜಾತಿ, ಮತ, ಲಿಂಗ, ವಯಸ್ಸಿನ ಭೇದ ಮರೆತು ಎಲ್ಲರಿಗೂ ಜ್ಯೋತಿಷ್ಯವನ್ನು ತರಗತಿಯ ಮೂಲಕ ಸರಳವಾಗಿ ಕಲಿಸಲಾಗುತ್ತಿದೆ. ಈ ವರೆಗೆ ಸಾವಿರಾರು ಆಸಕ್ತರು ಇದರ ಲಾಭ ಪಡೆದಿದ್ದಾರೆ. ನುರಿತ ಶಿಕ್ಷಕ ವರ್ಗ, ಗ್ರಂಥಾಲಯ ಇಲ್ಲಿದೆ ಎಂದರು.

ಸಂಸ್ಥೆಯ ಗೌರವ ಅಧ್ಯಕ್ಷ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಸ್ಥಾನ ಪಡೆದ ರಾಮಚಂದ್ರ ಪಾಟೀಲ ಅವರಿಗೆ ಬಹುಮಾನ ನೀಡಲಾಯಿತು. ಜ್ಯೋತಿಷ್ಯ ಪ್ರವೇಶಿಕಾ, ಆಚಾರ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಎಸ್.ವಿ. ಘೋರ್ಪಡೆ, ಎನ್.ಎಂ. ಮಂಗಳೂರ, ಡಾ. ನಿರಂಜನ್ ಹೆಗಡೆ, ವಿದ್ವಾನ್ ಗುರುರಾಜ ಹೆರಕಲ್, ರಾಜೇಶ್ವರಿ ಪೂಜಾರ್, ಸಂಜಯ ಭಟ್ ಸಿಸಿರ್, ಗೋವಿಂದ ಕಂಬಾರ್, ವಿ.ಜಿ. ತೋರವಿ, ಪ್ರಹ್ಲಾದ್ ನಾಡಗೌಡ್ರು, ಶರಣಮ್ಮ ಸೊಪ್ಪಿಮಠ, ಭರತ್ ಕುಮಾರ ಪಾಠಡಿಯ, ರಾಚಯ್ಯ ಹಿರೇಮಠ, ಹಿರಿಯ ಜ್ಯೋತಿಷಿಗಳು ಉಪಸ್ಥಿತರಿದ್ದರು.

ಸಂಜೆ ಸಂಸ್ಥೆಯ ವಾಷಿರ್ಕ ಸಭೆ ನಡೆಯಿತು. ಶಿಲ್ಪಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು, ಡಾ. ಪವನ ಜೋಶಿ ಸ್ವಾಗತಿಸಿದರು, ದೀಪಾ ಹೆಗಡೆ ಪ್ರಾಥಿರ್ಸಿದರು, ಸಂಜಯ ತ್ರಾಸದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net