

ಹುಬ್ಬಳ್ಳಿ: ಅನೇಕ ಬಡ ಮಕ್ಕಳಿಗೆ ವೈದಿಕ ಜ್ಯೋತಿಷ್ಯ ಹೇಳುವುದರ ಮೂಲಕ ಬದಲಾವಣೆ ತಂದಿರುವ ಚಿಕೇನಕೊಪ್ಪ ಶ್ರೀ ಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದ ವೈದಿಕ ಜ್ಯೋತಿಷ್ಯ ಪಾಠಶಾಲೆಯ ಪ್ರಾಧ್ಯಾಪಕ ಬಸಯ್ಯ ಶಾಸ್ತ್ರಿಗಳ ಸೇವಾ ಕಾರ್ಯ ಸ್ಮರಣೀಯವಾಗಿದೆ ಎಂದು ಬಳಗಾನೂರು ಶ್ರೀ ಶಿವಶಾಂತವೀರ ಶರಣರು ಹೇಳಿದರು.
ನವನಗರದ ಆಶ್ರಮದಲ್ಲಿ ಸೇವಾ ನಿವೃತ್ತರಾದ ಬಸಯ್ಯ ಶಾಸ್ತ್ರೀಗಳಿಗೆ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಆಶ್ರಮದ ಉಪಾಧ್ಯಕ್ಷ ಬಸವರಾಜ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.
ಖಜಾಂಚಿ ದಿನೇಶ ಮಹಾಜನ್, ಧರ್ಮದರ್ಶಿಗಳಾದ ರಾಜುಗೌಡ ಪಾಟೀಲ ಶಲವಡಿ, ಪ್ರಭು ರೋಣದ, ಭಕ್ತರಾದ ಈಶ್ವರಚಂದ್ರ ಹೊಸಮನಿ, ಚಂದ್ರಶೇಖರ ಹತ್ತಿ, ನಿವೃತ್ತ ಪ್ರಾಚಾರ್ಯ ಎಸ್.ಎಸ್. ಜಂಗ್ಲೆಪ್ಪಗೌಡರ, ವ್ಯವಸ್ಥಾಪಕ ಶಂಕ್ರಯ್ಯ ಹಿರೇಮಠ ಇತರರು ಇದ್ದರು.