ಅನುದಾನಿತ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆ !

Suresh Kumar
Suresh Kumar
Published on

ಬೆಂಗಳೂರು : ಸರ್ಕಾರಿ ಶಾಲಾ ಶಿಕ್ಷಕರಂತೆ ಅನುದಾನಿತ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸಲು ಆಲೋಚಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಹೇಳಿದರು.  ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂ, ರಾಜ್ಯ ಖಾಸಗಿ ಶಿಣ ಸಂಸ್ಥೆಗಳ ನೌಕರರ ಸೇರಿದಂತೆ ರಾಜ್ಯದ ವಿವಿಧ ಸಂಟನೆಗಳ ಆಶ್ರಯದಲ್ಲಿ ಧಾರವಾಡದಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ವಿಧಾನಪರಿಷತ್​ ಸದಸ್ಯ ಬಸವರಾಜ ಎಸ್​. ಹೊರಟ್ಟಿ ಮತ್ತು ಸಂಟನೆಗಳ ಪ್ರತಿನಿಧಿಗಳೊಂದಿಗೆ ಸಚಿವರು ಚರ್ಚೆ ನಡೆಸಿದರು.

ನಂತರ ಮಾತನಾಡಿ, ಅನುದಾನಿತ ಶಿಣ ಸಂಸ್ಥೆಗಳ ನೌಕರರಿಗೆ ಸರ್ಕಾರಿ ನೌಕರರಿಗಿರುವ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದ್ದು, ಈ ಕುರಿತಂತೆ ಮುಖ್ಯಮಂತ್ರಿಯವರೊಂದಿಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ಸರ್ಕಾರವು ಎಲ್ಲ ಶಿಕರ ಸಮಸ್ಯೆಯನ್ನು ಪರಿಹರಿಸಲು ತೆರೆದ ಮನಸ್ಸು ಹೊಂದಿದೆ. ಮೂರು ತಿಂಗಳ ಅವಧಿಯಲ್ಲಿ ಈಡೇರಿಸಲು ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕ್ರಮ ವಹಿಸುತ್ತದೆ. ನಾಡಿನ ಮಕ್ಕಳ ಹಿತದೃಷ್ಟಿಯಿಂದ ಸಂಟನೆಯು ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿ ಸಲ್ಲಿಸಿರುವ ಕಾಲ್ಪನಿಕ ವೇತನ ಅನುಷ್ಠಾನದಿಂದ ಆಗುವ ಆರ್ಥಿಕ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ವಿವರವಾದ ವರದಿ ತಯಾರಿಸಿ ಸಂಪುಟದ ಮುಂದಿಡಲಾಗುವುದು.  ಎನ್​ಪಿಎಸ್​ ಪದ್ಧತಿ ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆ ಮುಂದುವರೆಸುವುದು ಶಿಣ ಇಲಾಖೆಯೊಂದೇ ತೆಗೆದುಕೊಳ್ಳಬೇಕಾದ ನಿರ್ಧಾರವಲ್ಲ. ಅದು ಎಲ್ಲ ಇಲಾಖೆಗಳಿಗೂ ಸಂಬಂಧಿಸಿದಾಗಿದ್ದು, ಇದು ನೀತಿ ನಿರೂಪಣಾ ವಿಷಯವಾಗಿರುವುದರಿಂದ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಎಲ್ಲ ಇಲಾಖೆಗಳೂ ಸೇರಿ ಒಂದು ನಿರ್ಧಾರಕ್ಕೆ ಬರಬೇಕಿದೆ. ಹಳೇ ಪದ್ಧತಿಯನ್ನೇ ಮುಂದುವರೆಸುವುದು ಅಥವಾ ಎನ್​ಪಿಎಸ್​ ಮುಂದುವರೆಸುವುದಾದರೆ ಉದ್ಯೋಗದಾತನ ವಂತಿಗೆಯನ್ನು ಸರ್ಕಾರವೇ ಭರ್ತಿ ಮಾಡಬೇಕು ಎಂಬ ಕುರಿತ ಒಕ್ಕೂಟದ ಆಗ್ರಹವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ದೈಹಿಕ ಶಿಕರ ಬೇಡಿಕೆಗಳಿಗೆ ಸಂಬಂಧಿಸಿದ ಡಾ. ವೈದ್ಯನಾಥನ್​ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. 2015ರ ನಂತರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಸೇರಿದಂತೆ ಹಲವಾರು ಕಾರಣಗಳಿಂದ ತೆರವಾಗಿರುವ ಹುದ್ದೆಗಳ ಭರ್ತಿಗೆ ಪ್ರಸ್ತುತ ಆರ್ಥಿಕ ಇಲಾಖೆಯ ರ್ನಿಬಂಧದ ತೆರವಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು ಹಾಗೆಯೇ ರಾಜ್ಯದ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳ ವಿವರಗಳನ್ನು ಶಾಲಾವಾರು ಸಂಗ್ರಹಿಸಿ ಸಲ್ಲಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದರು.

ಶಿಕ ಮತ್ತು ವಿದ್ಯಾರ್ಥಿಗಳ ಪ್ರಸ್ತುತ ಅನುಪಾತ 1:70 ಇದ್ದು, ಅದನ್ನು 1:50ಕ್ಕೆ ಬದಲಾಯಿಸುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಸಂಬಂಧದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕ ಶಿಣ ಇಲಾಖೆಯ ಧಾರವಾಡ ವಿಭಾಗದಲ್ಲಿ 100ಕ್ಕಿಂತ ಕಡಿಮೆ ಇರುವ ಶಾಲೆಗಳ ನೋಂದಣಿ ರದ್ದುಪಡಿಸಲು ಆ ಭಾಗದ ಆಯುಕ್ತರು ಹೊರಡಿಸಿರುವ ಆದೇಶ ಶಿಣ ಅಧಿನಿಯಮದ ಆದೇಶಕ್ಕೆ ವಿರುದ್ಧವಾಗಿದ್ದು, ತಣವೇ ಹಿಂಪಡೆಯಲು ಅಪರ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು.

ಅನುದಾನ ರಹಿತ ಖಾಸಗಿ ಶಾಲೆಗಳ ಶಿಕರು ಮತ್ತು ಸಿಬ್ಬಂದಿ ಸೇವಾ ಭದ್ರತೆ ಆಯಾ ಆಡಳಿತ ಮಂಡಳಿಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಠಿಣ ಸುತ್ತೋಲೆಯನ್ನು ಕೂಡಲೇ ಜಾರಿ ಮಾಡಿ, ವಿಚಣಾ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದರು.
ವಿಧಾನಪರಿಷತ್​ ಸದಸ್ಯ ಬಸವರಾಜ ಎಸ್​. ಹೊರಟ್ಟಿ, ಸಂಟನೆಯ ರಾಜ್ಯ ಸಂಟನಾ ಕಾರ್ಯದರ್ಶಿ ಶಾಮ ಮಲ್ಲನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಆರ್​. ಭಟ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net