ಜೋಶಿ ಕಾರ್ಯ ಶ್ಲಾಘನೀಯ

18 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು 21 ವರ್ಷ ಕಾಲ ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಸಹ ಉಪ ಕುಲಪತಿಯಾಗಿ ಡಾ. ಎಸ್​.ಕೆ. ಜೋಶಿ ನೀಡಿದ ಕೊಡುಗೆ ಅನನ್ಯ. ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಬೆಳವಣಿಗೆಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ಎಸ್​ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್​ ಕುಮಾರ ಹೇಳಿದರು.
ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಹಿರಿಯ ರೇಡಿಯಾಲಜಿ ಪ್ರಾಧ್ಯಾಪಕ, ವಿಶ್ವ ವಿದ್ಯಾಲಯದ ಸಹ ಉಪ ಕುಲಪತಿ ಡಾ. ಎಸ್​.ಕೆ ಜೋಶಿ ಸೇವಾ ನಿವೃತ್ತಿ ನಿಮಿತ್ತ ಎಸ್​ಡಿಎಂ ಕಾಲೇಜಿನಲ್ಲಿ ಇತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜೋಶಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಸ್​.ಕೆ ಜೋಶಿ, 21 ವರ್ಷಗಳ ಸೇವೆಗೆ ಅನುವು ಮಾಡಿಕೊಟ್ಟ ಕುಲಪತಿ, ಉಪ ಕಲಪತಿ ಸೇರಿ ಎಲ್ಲ ಸಿಬ್ಬಂದಿಗೂ ಕೃತಜ್ಞತೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಹಿರಿಯ ಪ್ರಾಧ್ಯಾಪಕ ಡಾ. ನರೇಂದ್ರ ಶಾ ಮಾತನಾಡಿದರು. ಡಾ. ಎಸ್​.ಕೆ ಜೋಶಿ ದಂಪತಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಎಸ್​ಡಿಎಂ ವಿವಿ ಕಾರ್ಯ ನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್​, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿ ವಿ. ಜಿ. ಪ್ರಭು, ಎಸ್​ಡಿಎಂ ವಿವಿ ಅಂಗ ಸಂಸ್ಥೆಗಳ ಮುಖ್ಯಸ್ಥರು, ವೈದ್ಯಕಿಯ ಅಧೀಕ್ಷಕರು, ಉಪ ವೈದ್ಯಕಿಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು, ವೈದ್ಯಕಿಯ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net