ಸುಸಜ್ಜಿತ ಆಸ್ಪತ್ರೆ ಆರಂಭಕ್ಕೆ ಜೋಶಿ ಕೊಡುಗೆ ಅಪಾರ; ಗಂಜಿಗಟ್ಟಿಯಲ್ಲಿ ಉಚಿತ ವೈದ್ಯಕೀಯ ತಪಾಸಣೆ

HEALTH CAMP
Published on

ಕಲಘಟಗಿ: ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ಡಿಸೆಂಬರ್ ಅಂತ್ಯದ ಒಳಗೆ ನಿರ್ವಣವಾಗಲಿರುವ ಬೃಹತ್ ನೂತನ ಕೆಎಲ್​ಇ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸುಸಜ್ಜಿತ ಆಸ್ಪತ್ರೆ ಆರಂಭವಾಗುವಲ್ಲಿ ಸಂಸದ ಜೋಶಿಯವರ ಕೊಡುಗೆ ಅಪಾರವಾಗಿದೆ ಕೆಎಲ್​ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ತಾಲೂಕಿನ ಗಂಜಿಗಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸಂಸ್ಥೆ, ಜಗದ್ಗುರು ಗಂಗಾಧರ ಮೂರುಸಾವಿರ ಮಠ ಕಾಲೇಜ್, ಕೆಎಲ್​ಇ ವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಆಸ್ಪತ್ರೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಬೃಹತ್ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಇಂತಹ ಬೃಹತ್ ಉಚಿತ ವೈದ್ಯಕೀಯ ಶಿಬಿರಗಳು ಗ್ರಾಮೀಣ ಭಾಗದ ಬಡ ಜನತೆಗೆ ಬಹಳಷ್ಟು ಉಪಯುಕ್ತವಾಗಿದೆ. ಇಂತಹ ಹಲವು ಶಿಬಿರಗಳನ್ನು ಡಾ. ಪ್ರಭಾಕರ ಕೋರೆಯವರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದರು.

ಕೆಎಲ್​ಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಗಂಜಿಗಟ್ಟಿ, ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಗ್ರಾಪಂ ಅಧ್ಯಕ್ಷೆ ನಿಂಗವ್ವ ಹರಿಜನ, ಉಪಾಧ್ಯಕ್ಷೆ ಅನ್ನಪೂರ್ಣಾ, ಬಸವರಾಜ ಗಾಣಿಗೇರ, ಸುರೇಶ ಧಾರವಾಡ, ಮಲ್ಲಪ್ಪ ಶಿಗಿಗಟ್ಟಿ, ಭೀಮಣ್ಣ ಗಾಣಿಗೇರ, ಬಿ.ಕೆ. ಗಾಣಿಗೇರ, ಮುದಕಪ್ಪ ತೆಂಬದಮನಿ, ಬಸವರಾಜ ಹಳಕಟ್ಟಿ, ಡಾ. ಅಶೋಕ ಹರಳಿ, ಕುಬೇರಪ್ಪ ಕುಂದಗೋಳ, ಹಾಲಪ್ಪ ಕಂಪ್ಲಿಕೊಪ್ಪ, ಇತರರು ಉಪಸ್ಥಿತರಿದ್ದರು.

ತಾಲೂಕು ಅಧ್ಯಕ್ಷ ಬಸವರಾಜ ಶೆರೇವಾಡ, ಶಶಿಧರ ಹುಲಿಕಟ್ಟಿ ಹಾಗೂ ಅಣ್ಣಪ್ಪ ಓಲೇಕಾರ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ಕಾರ್ಯಕರ್ತರು ಹಾಗೂ ನೆರೆದಿದ್ದ ಶಿಬಿರಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಿಸಿದರು.

ಕೆಎಲ್​ಇ ಆಸ್ಪತ್ರೆ ಹಾಗೂ ಹುಬ್ಬಳ್ಳಿ ನಗರದ 40 ಜನ ನುರಿತ ತಜ್ಞ ವೈದ್ಯರು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದರು. ಡಾ. ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಡಾ. ಶ್ರೀನಿವಾಸ ಜೋಶಿ 70 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿದರು. ಡಾ. ಜಿ.ಬಿ. ಸತ್ತೂರ ಆಸ್ಪತ್ರೆ ವತಿಯಿಂದ ಉಚಿತ ಇಕೋ ಕಾರ್ಡಿಯೋಗ್ರಾಫಿ ಹಾಗೂ ಇಸಿಜಿ, ಡಾ. ಜೀವಣ್ಣವರ ಆಸ್ಪತ್ರೆಯಿಂದ ಉಚಿತ ರಕ್ತದೊತ್ತಡ ಹಾಗೂ ಬ್ಲಡ್ ಶುಗರ್ ಹಾಗೂ ರಕ್ತ ಪರೀಕ್ಷೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net