ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೋಶಿ

new nuggikeri joshi new
Published on

ಹುಬ್ಬಳ್ಳಿ : ಹನುಮ ಜಯಂತಿ ದಿನವಾದ ಮಂಗಳವಾರದಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿ-ಧಾರವಾಡದ ಹನುಮಂತ ಮಂದಿರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಧಾರವಾಡ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಪ್ರಲ್ಹಾದ ಜೋಶಿ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹನುಮಂತ ದೇವರ ಮೂರ್ತಿಯ ಮೇಲೆ ಇಟ್ಟಿದ್ದ ತಾವರೆ ಹೂವು ಬಿದ್ದಿದೆ. ಇದನ್ನು ಹನುಮಂತ ದೇವರ ಆಶೀರ್ವಾದವೆಂದ ಪ್ರಲ್ಹಾದ ಜೋಶಿ, ಪ್ರಸಾದ ರೂಪದಲ್ಲಿ ದೇವರು ಹರಿಸಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.

ಅರ್ಚಕರು ಪ್ರಸಾದ ರೂಪದಲ್ಲಿ ಅದೇ ತಾವರೆ ಹೂವನ್ನು ಸಚಿವರಿಗೆ ಮಂಗಳಾರತಿ ಜತೆ ಅರ್ಪಿಸಿ ಹರಸಿದರು.

ಇದಕ್ಕೂ ಮೊದಲು ಹುಬ್ಬಳ್ಳಿ ಗೋಕುಲದ ಧಾರಾವತಿ ಆಂಜನೇಯ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರಲ್ಹಾದ ಜೋಶಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಒಂಟಿ ಹನುಮಪ್ಪನ ದೇವಸ್ಥಾನಕ್ಕೂ ತೆರಳಿ, ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net