ಶಿಗ್ಗಾಂವಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಜೋಶಿ

15-SGN-5. joshi
Published on

ಶಿಗ್ಗಾಂವಿ: ಎರಡನೇ ಬಾರಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಪ್ರಥಮ ಬಾರಿ ಪಟ್ಟಣಕ್ಕೆ ಆಗಮಿಸಿದ ಪ್ರಲ್ಹಾದ ಜೋಶಿ ಅವರನ್ನು ಬಿಜೆಪಿ ಕಾರ್ಯಕರ್ತರು ಶನಿವಾರ ಸಂಜೆ ಸ್ವಾಗತ ನೀಡಿದರು.


ಗಂಗೀಭಾವಿ ಕ್ರಾಸ್​ನಲ್ಲಿ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು, ಸಚಿವ ಜೋಶಿ ಅವರಿಗೆ ಭವ್ಯ ಸ್ವಾಗತ ನೀಡಿ ಸನ್ಮಾನಿಸಿದರು. ಗ್ರಾಮದೇವಿ, ವೆಂಕಟೇಶ್ವರ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.


ನಂತರ ವಿರಕ್ತಮಠಕ್ಕೆ ತೆರಳಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ಶಶಿಧರ ಯಲಿಗಾರ, ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗಿಮಠ, ಶಂಕರಗೌಡ್ರ ಪೊಲೀಸ್​ಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net