ಕುಟುಂಬದೊಂದಿಗೆ ಕಾಲ ಕಳೆದ ಜೋಶಿ

h8-Joshi 2
Published on

ಹುಬ್ಬಳ್ಳಿ: ಲೋಕಸಭಾ ಚುನಾವಾಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ದರು. ಮಂಗಳವಾರ ಮತದಾನ ಮುಗಿದಿದ್ದು, ನಗರದ ತಮ್ಮ ನಿವಾಸದಲ್ಲಿ ಬುಧವಾರ ಕುಟುಂಬದವರೊಂದಿಗೆ ಬಹಳ ಹೊತ್ತು ಕಾಲ ಕಳೆದರು.
ಬೆಳಗ್ಗೆಯಿಂದಲೇ ತಮ್ಮ ನಿವಾಸಕ್ಕೆ ಬಂದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚಿಸಿದರು. ನಂತರ ಪತ್ನಿ ಜ್ಯೋತಿ ಜೋಶಿ, ಮಕ್ಕಳಾದ ಅರ್ಪಿತಾ, ಅನುಷಾ ಹಾಗೂ ಅನನ್ಯಾ ಜತೆಗೆ ಕಾಲ ಕಳೆದರು. ಮೊಮ್ಮಕ್ಕಳೊಂದಿಗೆ ಆಟವಾಡಿದರು. ಇದರ ಮಧ್ಯೆ ಬಿಡುವು ಮಾಡಿಕೊಂಡು ತಮ್ಮ ಅನುಯಾಯಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net