ಲಂಬಾಣಿ ಸಮುದಾಯದ ಮತ ಯಾಚಿಸಿದ ಜೋಶಿ

Joshi Lambani New
Published on

ಹುಬ್ಬಳ್ಳಿ : ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಲಂಬಾಣಿ ಸಮುದಾಯದ ಪ್ರಮುಖರ ಸಭೆಯಲ್ಲಿ ಸಮುದಾಯದ ಮತಯಾಚಿಸಿದ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸಬೇಕು ಎಂದು ಕೋರಿದರು.

ಲಂಬಾಣಿ ಸಮುದಾಯ ತನ್ನ ಶ್ರಮ, ಶಕ್ತಿಯ ಮೂಲಕ ದೇಶದ ಏಳಿಗೆಯಲ್ಲಿ ತೊಡಗಿಸಿಕೊಂಡಿದೆ. ತಾಂಡಾಗಳ ಅಭಿವೃದ್ಧಿ ನನ್ನ ಮೊದಲ ಕನಸಾಗಿದೆ. ಮಕ್ಕಳಿಗೆ ಶಿಕ್ಷಣ ನೀಡಬೇಕು. ಲಂಬಾಣಿ ಸಮುದಾಯದ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವ ನಾನು, ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ. ಲಂಬಾಣಿ ಸಮಾಜದ ಜನರಿಗೆ ಮೂಲ ಸೌಲಭ್ಯ ಕೊಡಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಲಂಬಾಣಿ ಸಮುದಾಯದ ಏಳಿಗೆಗೆ ಪೂರಕವಾಗುವಂತೆ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಮುಂದೆಯೂ ಸಮುದಾಯದ ಸರ್ವತೋಮುಖ ಪ್ರಗತಿಗೆ ಬಿಜೆಪಿ ಸರ್ಕಾರ ಮತ್ತು ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.

ಸಮುದಾಯದ ಪ್ರಮುಖರಾದ ಕೃಷ್ಣಾಜಿ ಚೌಹಾಣ, ಹರಿಲಾಲ ಪವಾರ, ಮಂಗ್ಲಪ್ಪ ಲಮಾಣಿ, ಅರ್ಜುನ ಲಮಾಣಿ, ಚಂದ್ರಶೇಖರ ಗೋಕಾಕ ಹಾಗೂ ತಾಂಡಾದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net