ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ಅರವಿಂದನಗರ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಮುಖಂಡ ಗೋವಿಂದ ಜೋಶಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ 65 ಕಾರ್ಯಕರ್ತರು ರಕ್ತದಾನ ಮಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಕಾರ್ಯಾಲಯ ಕಾರ್ಯದರ್ಶಿ ಮುರಗೇಶ ಹೊರಡಿ, ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಡಾ. ರವೀಂದ್ರ ಯಲ್ಕಾನ, ಕಷ್ಣಾ ಗಂಡಗಾಳೇಕರ, ರಾಜು ಜರತಾರರ, ಅಣ್ಣಪ್ಪ ಗೋಕಾಕ, ಚಂದ್ರು ನೂಲ್ವಿ, ಮಂಜುನಾಥ ಕಾಟಕರ, ಅವಿನಾಶ ಹರಿವಾಣ, ಮಹೇಶ ಸೆರಿಗಾರ, ರಾಜು ಕೋರ್ಯಾನಮಠ, ಡಿ. ರು, ನಾಗರಾಜ ಹರಿಜನ, ಮಂಜುನಾಥ ಬಿಜವಾಡ, ಜಗದೀಶ ಕಂಬಳಿ, ಎಸ್.ಎಚ್. ಮುಂದಿನಮನಿ, ರಾಜೇಶ್ವರಿ ಸಾಲಗಟ್ಟಿ, ಸೀಮಾ ಲದ್ವಾ, ರೂಪಾ ಶೆಟ್ಟಿ,ವಿಜಯಲಕ್ಷಿ$್ಮ ತಿಮ್ಮೊಲೆ, ಅಕ್ಕಮ್ಮಾ ಹೆಗಡೆ, ಮೇನಾ ಶಿಂಧೆ, ಸಂಗೀತಾ ಬದ್ದಿ, ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net