ಜೋಸೆಫ್ ನಗರದಲ್ಲಿ ಬಲಿಪೂಜೆ

Oplus_131072
ಆಲೂರು ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರ ಗ್ರಾಮದಲ್ಲಿರುವ ಸಂತ ಜೋಸೆಫರ ಚರ್ಚಿನಲ್ಲಿ ಫಾದರ್ ಆಲ್ವಿನ್ ಜೋಸೆಫ್ ಡಿಸೋಜಾ ಅವರು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬಲಿ ಪೂಜೆ ನೆರವೇರಿಸಿದರು.
Published on

ಆಲೂರು: ದೇವರು ಮಾನವನ ರೂಪವನ್ನು ತಾಳಿದ ದಿನವೇ ಕ್ರಿಸ್‌ಮಸ್ ಎಂದು ಸಂತ ಜೋಸೆಫರ ಚರ್ಚ್ ಧರ್ಮಗುರು ಆಲ್ವಿನ್ ಜೋಸೆಫ್ ಡಿಸೋಜ ಹೇಳಿದರು.

ಆಲೂರು ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರ ಗ್ರಾಮದಲ್ಲಿರುವ ಸಂತ ಜೋಸೆಫರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಗುರುವಾರ ರಾತ್ರಿ ಏರ್ಪಡಿಸಿದ್ದ ವಿಶೇಷ ಪ್ರಾರ್ಥನಾ ಸಭೆಯ ಬಲಿಪೂಜೆಯಲ್ಲಿ ಮಾತನಾಡಿದರು. ದೇವರು ಮಾನವನ ಮಧ್ಯೆ ಮಗುವಾಗಿ ಬಂದು ಪಾಪದ ಕತ್ತಲೆ ನೀಗಿಸಿ, ಮನುಕುಲಕ್ಕೆ ಶಾಂತಿ ಸಂದೇಶದ ಬೆಳಕು ನೀಡಿದ ದಿನವಾಗಿ ಕ್ರಿಸ್‌ಮಸ್ ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ಈ ಹಬ್ಬವನ್ನು ಕ್ರೈಸ್ತರು ಮಾತ್ರವಲ್ಲದೆ ಎಲ್ಲ ಧರ್ಮದವರೂ ಸೇರಿ ಬೆಳಕಿನ ಹಬ್ಬವನ್ನಾಗಿ ಆಚರಣೆ ಮಾಡುತ್ತಾರೆ ಎಂದರು.

ಬಲಿ ಪೂಜೆ ನಂತರ ಕ್ರೈಸ್ತರು ಪರಸ್ಪರ ಕೇಕ್ ನೀಡಿ ಹಬ್ಬದ ಶುಭಾಶಯ ಹಂಚಿಕೊಂಡರು. ಧರ್ಮಕೇಂದ್ರದ ಆವರಣದಲ್ಲಿ ಜೋಸೆಫ್ ನಗರ ಯುವಕ ಬಳಗದವರು ಆಕರ್ಷಣೀಯವಾಗಿ ಗೋದಲಿ ನಿರ್ಮಾಣ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಚರ್ಚ್ ಹಾಗೂ ಅಲ್ಲಿನ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net