ಶಾಲಾ ಆವರಣದಲ್ಲಿ ಮೋಜು ಮಸ್ತಿ

Crime
Published on

ಕಡಬ: ಲಾಕ್‌ಡೌನ್ ಸಂದರ್ಭ ಸರ್ಕಾರಿ ಶಾಲೆಯೊಂದರಲ್ಲಿ ಕಿಡಿಗೇಡಿಗಳು ಮೋಜು ಮಸ್ತಿಯಲ್ಲಿ ತೊಡಗಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಕಡಬ ತಾಲೂಕು ಕೊಯಿಲ ಸರ್ಕಾರಿ ಶಾಲೆಗೆ ಕಾರು ಹಾಗೂ ಬೈಕ್‌ನಲ್ಲಿ ಬಂದಿದ್ದ 10ಕ್ಕೂ ಹೆಚ್ಚು ಕಿಡಿಗೇಡಿಗಳು ಶಾಲಾ ಜಗಲಿಯಲ್ಲೇ ಕಿಡಿಗೇಡಿತನ ಮೆರೆದಿದ್ದಾರೆ. ಅಲ್ಲೇ ಮಾಂಸದೂಟ ತಯಾರಿಸಿದ ಕುರುಹುಗಳು ಕಂಡುಬಂದಿವೆ. ಬೀಡಿ ಸಿಗರೇಟುಗಳು ಸ್ಥಳದಲ್ಲಿ ಕಂಡುಬಂದಿವೆ. ರಾತ್ರಿ ಗಾಳಿ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಸ್ಥಳಿಯ ನಿವಾಸಿಗಳು ಪರಿಶೀಲಿಸುವ ಸಲುವಾಗಿ ಶಾಲಾ ಪರಿಸರಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ವಾಹನಗಳು ನಿಲುಗಡೆಯಾಗಿರುವುದನ್ನು ಕಂಡು ಶಾಲೆಗೆ ತೆರಳಿ ನೋಡಿದಾಗ ಕಿಡಿಗೇಡಿಗಳು ಪಲಾಯನ ಮಾಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net