ಜೊಲ್ಲೆ ಪರಿವಾರ ಎಂದೆಂದೂ ಜನಪರ

web4
ಯಕ್ಸಂಬಾ ಪಟ್ಟಣದಲ್ಲಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಅವರು ದೀಪಾಲಿ ಮಾಳಿ ಅವರಿಗೆ 10 ಲಕ್ಷ ರೂ.ಚೆಕ್ ವಿತರಿಸಿದರು. ಮಹಾದೇವ ರಾಯಜಾಧವ, ಶಂಕರ ರೆಂದಾಳೆ, ರಾಜು ಮಾಗದುಮ್ಮ, ರಾಜು ಬಾಕಳೆ, ರಾಮಚಂದ್ರ ಬಾಕಳೆ ಇತರರಿದ್ದರು.
Published on

ಚಿಕ್ಕೋಡಿ: ಯಕ್ಸಂಬಾ ಪಟ್ಟಣದ ಪ್ರತಿಷ್ಠಿತ ಜೊಲ್ಲೆ ಗ್ರೂಪ್‌ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಮಲ್ಟಿ-ಸ್ಟೇಟ್)ದ 2ನೇ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿ 9

ವರ್ಷಗಳಿಂದ ಸೇವೆ ಸಲ್ಲಿಸಿದ್ದ ಯಕ್ಸಂಬಾದ ಗ್ರಾಪಂ ಮಾಜಿ ಸದಸ್ಯ ದಿ.ದಯಾನಂದ ಮಾಳಿ (ಕಾಡಾಪುರೆ) ಈಚೆಗೆ ಅಕಾಲಿಕ ನಿಧನರಾಗಿದ್ದರಿಂದ ವಾರಸುದಾರ್ತಿ ದೀಪಾಲಿ ದಯಾನಂದ ಮಾಳಿ (ಕಾಡಾಪುರೆ) ಅವರಿಗೆ 10 ಲಕ್ಷ ರೂ.ಮೊತ್ತದ ವಿಮೆ ಚೆಕ್‌ಅನ್ನು ಜೊಲ್ಲೆ ಗ್ರೂಪ್ ಸಂಸ್ಥಾಪಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಸೋಮವಾರ ವಿತರಿಸಿದರು.

ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, 2018ರಿಂದ ಇಲ್ಲಿಯವರೆಗೆ ನಿರ್ದೇಶಕ ಮಂಡಳಿ ಸದಸ್ಯರಿಗೆ ಮತ್ತು ಸಿಬ್ಬಂದಿ ಮರಣ ಹೊಂದಿದ್ದಲ್ಲಿ ಅವರ ವಾರಸದಾರರರಿಗೆ ಒಟ್ಟು 17 ಕೋಟಿ ರೂ.ಗೂ ಅಧಿಕ ವಿಮೆ ನೀಡಲಾಗಿದೆ. ಸಂಸ್ಥೆಯ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿಯೊಂದಿಗೆ ಜೊಲ್ಲೆ ಪರಿವಾರ ಸದಾ ಇರುತ್ತದೆ ಎಂದು ಹೇಳಿದರು.

ಮಹಾದೇವ ರಾಯಜಾಧವ, ಶಂಕರ ರೆಂದಾಳೆ,ರಾಜು ಮಾಗದುಮ್ಮ,ರಾಜು ಬಾಕಳೆ, ರಾಮಚಂದ್ರ ಬಾಕಳೆ, ಮಹಾದೇವ ರೆಂದಾಳೆ, ಶರದ ಶಿಂಧೆ,ಬಸವರಾಜ ವಸ್ತ್ರದ, ವಿಷ್ಣು ಬುಬನಾಳೆ, ತುಕಾರಾಮ ಗಿಡ್ಡ, ಬಾಲಚಂದ್ರ ಸಲಗರೆ, ಸಂತೋಷ ಶಿಂಧೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net